ಪ್ರಿಯಾಂಕಾ ವಾರಣಾಸಿಯಿಂದ ಸ್ಪರ್ಧಿಸಿದ್ದರೆ ಪ್ರಧಾನಿ ಮೋದಿ ಸೋಲುತ್ತಿದ್ದರು : ರಾಹುಲ್ ಗಾಂಧಿ – vishwanews24
ಪ್ರಿಯಾಂಕಾ ವಾರಣಾಸಿಯಿಂದ ಸ್ಪರ್ಧಿಸಿದ್ದರೆ ಪ್ರಧಾನಿ ಮೋದಿ ಸೋಲುತ್ತಿದ್ದರು : ರಾಹುಲ್ ಗಾಂಧಿ
ಲಕ್ನೋ : ಸಹೋದರಿ ಪ್ರಿಯಾಂಕಾ ಅವರು ವಾರಣಾಸಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದರೆ ಪ್ರಧಾನಿ ನರೇಂದ್ರ ಮೋದಿ ಎರಡರಿಂದ ಮೂರು ಲಕ್ಷ ಮತಗಳ ಅಂತರದಿಂದ ಸೋಲುತ್ತಿದ್ದರು ಎಂದು ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಯ್‌ಬರೇಲಿ ನಡೆದ ಕೃತಜ್ಞತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ವಾರಣಾಸಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮೋದಿ ಅವರ ಅವರ ರಾಜಕೀಯವನ್ನು ಜನರು ತಿರಸ್ಕರಿಸುತ್ತಾರೆ ಎಂದು ತಿಳಿಸಿದರು.
ಪಡುಬಿದ್ರಿ: ಕಂಟೈನರ್ ಲಾರಿ ಹಿಂಬದಿಗೆ ಬಸ್ ಢಿಕ್ಕಿ : 20 ಮಂದಿಗೆ ಗಾಯ – vishwanews24
ಹಿಂಸಾಚಾರ ಮತ್ತು ದ್ವೇಷದ ರಾಜಕಾರಣದಲ್ಲಿ ಬಹಿರಂಗವಾಗಿ ತೊಡಗಿರುವ ಪ್ರಧಾನಿಗೆ ಉತ್ತರ ಪ್ರದೇಶದ ಜನರು ಉತ್ತರ ನೀಡಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಕಾಂಗ್ರೆಸ್ ಪಕ್ಷವು ರಾಯ್‌ಬರೇಲಿ, ಅಮೇಥಿ ಸೇರಿದಂತೆ ಉತ್ತರ ಪ್ರದೇಶ ಮತ್ತು ಭಾರತದಾದ್ಯಂತ ಒಗ್ಗಟ್ಟಿನಿಂದ ಹೋರಾಡಿದೆ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚುನಾವಣೆಯನ್ನು ಎದುರಿಸಿದ್ದರಿಂದ ಈ ಗೆಲುವು ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಮಿಳುನಾಡು, ಉತ್ತರ ಪ್ರದೇಶ, ಮಣಿಪುರ, ರಾಜಸ್ಥಾನ, ಕರ್ನಾಟಕ, ತೆಲಂಗಾಣ ಸೇರಿದಂತೆ ಈ ಚುನಾವಣೆಯಲ್ಲಿ ದೇಶದ ಪ್ರತಿಯೊಂದು ರಾಜ್ಯವೂ ಒಗ್ಗೂಡಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಭಾರತದ ಅಡಿಪಾಯವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ದೇಶಕ್ಕೆ ಗೊತ್ತಾಗಿದೆ ಎಂದರು.
ಕಾಪು ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ – vishwanews24
