ಪ್ರೀತಂಗೌಡ ನಿವಾಸದ ಮುಂದೆ ಕಲ್ಲುತೂರಾಟ ಪ್ರಕರಣ :ಜೆಡಿಎಸ್ ಕಾರ್ಯಕರ್ತನ ಬಂಧನ – Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ಹಾಸನ : ಬಿಜೆಪಿ ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಟನೆ ವೇಳೆ ಜೆಡಿಎಸ್ ಕಾರ್ಯಕರ್ತ ಚೇತನ್ ಗೌಡ ಕಲ್ಲು ತೂರಿದ್ದು, ವಿಡಿಯೋದಿಂದ ಬಹಿರಂಗವಾಗಿತ್ತು. ಇದೀಗ ಚೇತನನ್ನು ಬಡವಾಣೆ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿ ಚೇತನ್ ನನ್ನು ಜೈಲಿಗೆ ಕಳುಹಿಸಿದ್ದಾರೆ.

ಫೆಬ್ರವರಿ 13ರಂದು ಬಿಜೆಪಿ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಯುತ್ತಿದ್ದ ಸಯಮದಲ್ಲಿ ಚೇತನ್ ಎರಡು ಕಲ್ಲೆತ್ತಿಕೊಂಡು ಬಂದು ಜನರ ನಡುವೆ ನಿಂತು ಶಾಸಕರ ಮನೆಯತ್ತ ಕಲ್ಲೆಸೆದಿದ್ದಾನೆ. ಬಳಿಕ ಕಲ್ಲೆಸೆದು ಸದ್ದಿಲ್ಲದೆ ಹಿಂದೆ ಓಡಿ ಹೋಗಿದ್ದನು. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಈಗ ಶುಕ್ರವಾರ ರಾತ್ರಿ ಚೇತನ್ ನನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ..