ಪ್ರೀತಿಸಿ ಮದುವೆ ಆಗಿದ್ದ ಹೆಂಡತಿ ಸ್ನೇಹಿತನ ಜೊತೆ ಪರಾರಿ : ಮನನೊಂದ ಪತಿ ನೇಣಿಗೆ ಶರಣು – vishwanews24
ಪ್ರೀತಿಸಿ ಮದುವೆ ಆಗಿದ್ದ ಹೆಂಡತಿ ಸ್ನೇಹಿತನ ಜೊತೆ ಪರಾರಿ : ವಿಡಿಯೋ ಮಾಡಿ ನೇಣಿಗೆ ಶರಣಾದ ಪತಿ
ಗುಬ್ಬಿ: ಪ್ರೀತಿಸಿ ಮದುವೆ ಆಗಿದ್ದ ದಂಪತಿಗಳ ಮಧ್ಯೆ ಬಂದ ಸ್ನೇಹಿತ ಪತ್ನಿಯನ್ನು ಮೋಹಿಸಿ ಕರೆದೊಯ್ದ ವಿಚಾರಕ್ಕೆ ಮನ ನೊಂದ ಪತಿ ಸೆಲ್ಸಿ ವಿಡಿಯೋ ಮೂಲಕ ನನ್ನ ಸಾವಿಗೆ ಓಡಿ ಹೋದ ಪತ್ನಿ ಹಾಗೂ ಸ್ನೇಹಿತ ಕಾರಣ ಎಂದು ಹೇಳಿ ನ್ಯಾಯ ಕೊಡಿಸಿ ಎಂದು ಸ್ನೇಹಿತರಲ್ಲಿ ಮನವಿ ಮಾಡಿದ ವಿಡಿಯೋ ಫೇಸ್ ಬುಕ್ಗೆ ಅಪ್ಲೋಡ್ ಮಾಡಿ ನೇಣಿಗೆ ಶರಣಾದ ಧಾರುಣ ಘಟನೆ ಪಟ್ಟಣದ ಗಟ್ಟಿ ಲೇಔಟ್ ಬಡಾ ವಣೆಯಲ್ಲಿ ನಡೆದಿದೆ.
ನಾಗೇಶ್ (35) ನೇಣಿಗೆ ಶರಣಾದ ಪತಿ. ಕಳೆದ 12 ವರ್ಷದ ಹಿಂದೆ ರಂಜಿತಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ ನಾಗೇಶ್ ಈಚೆಗೆ ಸ್ವಂತ ಮನೆ ಮಾರಾಟ ಮಾಡಿ ಗಟ್ಟಿ ಲೇಔಟ್ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈಚೆಗೆ ಈ ದಂಪತಿಗಳ ಮಧ್ಯೆ ಬಿರುಗಾಳಿಯಂತೆ ಬಂದ ಸ್ನೇಹಿತ ಭರತ್ ಎಂಬಾತ ರಂಜಿತಾಳನ್ನು ಮೋಹಕ್ಕೆ ಸಿಲುಕಿಸಿಕೊಂಡು ಓಡಿ ಹೋದ ಘಟನೆ ನಡೆದಿದೆ.
ಗೃಹಲಕ್ಷ್ಮಿ, ಅನ್ನಭಾಗ್ಯ ಹಣವೇನು ತಿಂಗಳ ಸಂಬಳ ಅಲ್ವಲ್ಲಾ: ಸಚಿವ ಜಾರ್ಜ್ – vishwanews24
ತೀವ್ರ ಮನನೊಂದ ನಾಗೇಶ್ ಜಿಗುಪ್ಪೆಗೊಂಡು ಎರಡು ಮಕ್ಕಳನ್ನು ಬಿಟ್ಟು ಮಂಗಳವಾರ ಮನೆಯಲ್ಲಿ ಸೆಲ್ಸಿ ವಿಡಿಯೋ ಮಾಡಿ ತನ್ನ ಸಂಸಾರದಲ್ಲಿ ಬಂದ ಸ್ನೇಹಿತ ಭರತ್ ತನ್ನ ಪತ್ನಿ ರಂಜಿತಾ ಜೊತೆ ಅನೈತಿಕ ಸಂಬಂಧ ಹೊಂದಿದ್ದು ಈಚೆಗೆ ಇಬ್ಬರು ಪರಾರಿಯಾದ ಘಟನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣನಾಗುತ್ತಾನೆ. ನನ್ನ ಸಾವಿಗೆ ಪತ್ನಿ ರಂಜಿತಾ ಹಾಗೂ ಸ್ನೇಹಿತ ಭರತ್ ಕಾರಣ ಎಂದು ಹೇಳಿ ವಿಡಿಯೋ ಫೇಸ್ ಬುಕ್ಗೆ ಅಪ್ಲೋಡ್ ಮಾಡಿ ನೇಣಿಗೆ ಶರಣಾಗಿದ್ದಾನೆ. ವಿಡಿಯೋ ನೋಡಿದ ಹಲವು ಸ್ನೇಹಿತರು ಮನೆಯತ್ತ ಬರುವ ವೇಳೆಗೆ ನಾಗೇಶ್ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಗುಬ್ಬಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ನೆಟ್ಟಗೆ ಆಡಳಿತ ಮಾಡಿ ಇಲ್ಲವೇ ರಾಜೀನಾಮೆ ಕೊಡಿ :ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ಒತ್ತಾಯ – vishwanews24
