ಪ್ರೇಮಿಗಳ ದಿನ” ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಾವಣಗೆರೆ ಜಿಲ್ಲಾಧಿಕಾರಿ – Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ದಾವಣಗೆರೆ: ಪ್ರೇಮಿಗಳ ದಿನವೇ ದಾವಣಗೆರೆ ಜಿಲ್ಲೆಯ ಇಬ್ಬರು ಐಎಎಸ್ ಅಧಿಕಾರಿಗಳು ಹಸೆಮಣೆ ಏರಿದ್ದಾರೆ. ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಎಸ್ ಅಶ್ವತಿ ಹಾಗೂ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಪ್ರೇಮ ವಿವಾಹವಾಗಿದ್ದಾರೆ.

ಪ್ರೇಮಿಗಳ ದಿನದಂದೇ ಖಡಕ್ ಐಪಿಎಸ್‌ ಅಧಿಕಾರಿಗಳು ಸಪ್ತಪದಿ ತುಳಿಯುತ್ತಿದ್ದು, ಕೇರಳದ ಕೋಯಿಕ್ಕೋಡ್‌ನಲ್ಲಿ ಮದುವೆ ಸಮಾರಂಭ ನಡೆಯಲಿದೆ. ದಾವಣಗೆರೆ ಡಿಸಿ ಡಾ.ಬಗಾದಿ ಗೌತಮ್ ಮೂಲತಃ ಆಂಧ್ರ ಪ್ರದೇಶದ ವಿಶಾಖಪಟ್ಟಣಂದವರು ಹಾಗೂ ಎಸ್. ಅಶ್ವತಿ ಕೇರಳದವರು.  ಕೇವಲ ಅರ್ಧ ಗಂಟೆಯಲ್ಲಿ ಸರಳ ವಿವಾಹ ಮುಗಿದಿದ್ದು ಹೊಸ ಜೀವನಕ್ಕೆ ಅಧಿಕಾರಿಗಳು ಕಾಲಿಟ್ಟಿದ್ದಾರೆ.

ನಾಲ್ಕು ತಿಂಗಳ ಹಿಂದೆ ರಾಯಚೂರಿನಿಂದ ದಾವಣಗೆರೆಗೆ ಬಂದ ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಮತ್ತು ಸಿಇಒ ಅಶ್ವತಿ ಕೆಲ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದರೂ ತಮ್ಮ ಪ್ರೇಮದ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಆದರೆ ತಾವಿಬ್ಬರೂ ಮದುವೆಯಾಗುತ್ತಿರುವುದಾಗಿ ಫೆ.1ರಂದು ಹೇಳಿ ಮದುವೆಯ ಆಮಂತ್ರಣ ಪತ್ರಿಕೆ ನೀಡಿದಾಗ ಪ್ರತಿಯೊಬ್ಬರು ತಬ್ಬಿಬ್ಬಾದರು. ಆ ಸಮಯದಲ್ಲಿ ಅವರು ತಮ್ಮಿಬ್ಬರ ನಡುವಿನ ಹಳೆಯ ಗೆಳೆತನ, ಪ್ರೀತಿಯ ಗುಟ್ಟು ರಟ್ಟು ಮಾಡಿದ್ದರು.

ಇದೇ 17ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.