ಪ್ರೇಯಸಿ ಕೈಕೊಟ್ಟ ಹಿನ್ನೆಲೆ : ಯುವಕ ನೇಣು ಬಿಗಿದು ಆತ್ಮಹತ್ಯೆ – vishwanews24

Featured, ರಾಜ್ಯ ನ್ಯೂಸ್

ಪ್ರೇಯಸಿ ಕೈಕೊಟ್ಟ ಹಿನ್ನೆಲೆ : ಯುವಕ ನೇಣು ಬಿಗಿದು ಆತ್ಮಹತ್ಯೆ

ರಾಯಚೂರು: ಪ್ರೇಯಸಿ ಕೈಕೊಟ್ಟ ಹಿನ್ನೆಲೆ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರುಜಿಲ್ಲೆಯ ಮಾನ್ವಿ ಪಟ್ಟಣ ಜನತಾ ಹೌಸ್ ಕಾಲೋನಿಯಲ್ಲಿ ನಡೆದಿದೆ. ಮಾನ್ವಿ ನಿವಾಸಿ ವರುಣ್ (26)ಆತ್ಮಹತ್ಯೆಗೆ ಶರಣಾದ ಯುವಕ. ಇನ್​ಸ್ಟ್ರಾಗ್ರಾಂ ಮೂಲಕ ಪರಿಚಯವಾಗಿದ್ದ ಯುವತಿ ಜೊತೆ ಮೃತ ವರುಣ್ ಪ್ರೀತಿ ಮಾಡಿದ್ದ. ಬಳಿಕ ಆ ಯುವತಿ ಬೇರೊಬ್ಬರ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಹಿನ್ನೆಲೆ ಮನನೊಂದು ವರುಣ್ ಮನೆಯಲ್ಲಿ ಫ್ಯಾನ್​ಗೆ ನೇಣುಬಿಗಿದುಕೊಂಡು ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿರಾಡಿಘಾಟ್ ಸಂಚಾರಕ್ಕೆ ಮುಕ್ತ : ಎಲ್ಲಾ ವಾಹನಗಳ ಓಡಾಟಕ್ಕೆ ಅವಕಾಶ – vishwanews24

ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಯುವತಿ ಇನ್​ಸ್ಟಾಗ್ರಾಂನಲ್ಲಿ ಪರಿಚಯವಾಗಿ ನಂತರ ಮುಖಾಮುಖಿ ಭೇಟಿಯಾಗಿದ್ದರು. ಬಳಿಕ ರಾಯಚೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದ ಯುವತಿ ಜೊತೆ ಪ್ರೇಮಾಂಕುರವಾಗಿದೆ. ಅದರಂತೆ ಕಳೆದ 5 ವರ್ಷದಿಂದ ವರುಣ್, ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ದಿಢೀರ್​ ಪ್ರೇಯಸಿಗೆ ಬೇರೊಬ್ಬನ ಜೊತೆ ನಿಶ್ಚಿತಾರ್ಥವಾಗಿದಕ್ಕೆ ವರುಣ್ ತೀವ್ರ ಬೇಸರಗೊಂಡಿದ್ದ. ಈ ಹಿನ್ನಲೆ ಇಂದು ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ನಂತರ ವರುಣ್ ನೇಣಿಗೆ ಶರಣಾಗಿದ್ದಾನೆ.

Leave a Reply