ಚಿಕ್ಕಬಳ್ಳಾಪುರ : 8 ತಿಂಗಳ ಹಿಂದೆಯಷ್ಟೇ ಸಪ್ತಪದಿ ತುಳಿದಿದ್ದ ಮಹಿಳೆ ತನ್ನ ಗಂಡ ಪರ ಸ್ತ್ರೀ ಜೊತೆ ಮೋಜು, ಮಸ್ತಿಯಲ್ಲಿ ಸುತ್ತಾಡಿದ್ದ ಪೋಟೋಗಳನ್ನು ನೋಡಿ ತೀವ್ರ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಣ್ಣೂರು ಕದಿರೇನಹಳ್ಳಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಹೆಣ್ಣೂರು ಕದಿರೇನಹಳ್ಳಿ ಗ್ರಾಮದ 20 ವರ್ಷದ ಮೌನಿಕಾ ಎಂದು ಗುರುತಿಸಲಾಗಿದೆ.
ಹಿಜಬ್ ತೀರ್ಪು – ಉಡುಪಿ ಜಿಲ್ಲೆಯಾದ್ಯಂತ ಕಾಲೇಜುಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ – Vishwanews24
ಏನಿದು ಪ್ರಕರಣ?
ವಿಜಯದಶಮಿ ಹಿನ್ನೆಲೆಯಲ್ಲಿ ಮೌನಿಕಳನ್ನು ಪತಿ ಭಾರ್ಗವ ತವರು ಮನೆಗೆ ಕಳುಹಿಸಿದ್ದ. ಈ ವೇಳೆ ಭಾರ್ಗವ್ ತನ್ನ ಪ್ರೇಯಸಿ ಜೊತೆ ಪ್ರವಾಸ ಹೋಗಿದ್ದಾನೆ. ಸಾಲದಿದ್ದಕ್ಕೆ ಪ್ರೇಯಸಿ ಜೊತೆ ಮೋಜು, ಮಸ್ತಿಯಲ್ಲಿ ಸುತ್ತಾಡಿರುವ ಪೋಟೋ, ವಿಡಿಯೋಗಳನ್ನು ತವರು ಮನೆಯಲ್ಲಿದ್ದ ಪತ್ನಿ ಮೋನಿಕಾ ಮೊಬೈಲ್‌ಗೆ ರವಾನಿಸಿದ್ದಾನೆ. ಇದನ್ನು ನೋಡಿದ ಮೋನಿಕಾ ತವರು ಮನೆಯಲ್ಲಿಯೆ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ತನ್ನ ಗಂಡನೆ ಕಾರಣ ಅಂತ ಡೆತ್ ನೋಟ್ ಸಹ ಬರೆದಿಟ್ಟಿದ್ದಾಳೆ.
ಹಿಜಾಬ್ ಕುರಿತಾಗಿ ಸುಪ್ರೀಂ ವಿಸ್ತೃತ ಪೀಠದ ತೀರ್ಪಿಗೆ ಎಲ್ಲರೂ ಬದ್ಧರಾಗಬೇಕು..
ಮೋನಿಕಾ ತಂದೆ ತಾಯಿ ಬಡವರಾದರು ಕಷ್ಟಪಟ್ಟು ಆಕೆಯನ್ನು ಪದವಿವರೆಗೂ ಓದಿಸಿದ್ದರು. ಚಿಕ್ಕಬಳ್ಳಾಪುರ ನಗರ ಪ್ರಶಾಂತ್ ನಗರ ನಿವಾಸಿ 25 ವರ್ಷದ ಭಾರ್ಗವ್ ಕೊಟ್ಟು ಕಳೆದ 8 ತಿಂಗಳ ಹಿಂದೆಯಷ್ಟೇ ಅದ್ದೂರಿಯಾಗಿ ವಿವಾಹ ಮಾಡಿದ್ದರು. ಆದರೆ ಆತ ಮತ್ತೊಬ್ಬ ಯುವತಿಯನ್ನು ಪ್ರೇಮಿಸುತ್ತಿರು ಪೋಟೋಗಳನ್ನು ನೋಡಿ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಷಯ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…
ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…
ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ ಬೆಂಗಳೂರು: ಕರ್ನಾಟಕ ಸರ್ಕಾರದ…
ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ ಉಡುಪಿ: ಯುವಜನರು ನಿರಂತರ ಪ್ರಯತ್ನದ…
ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಸಾಗಾಟ.. ಮಂಗಳೂರು ಸಿಸಿಬಿ ಬಲೆಗೆ ಮೂವರು ಆರೋಪಿಗಳು; ₹1.58 ಕೋಟಿ ಮೌಲ್ಯದ ಸೊತ್ತು…
ಮಂಗಳೂರು: ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಂಗಳೂರು: ಅನುಮಾನಾಸ್ಪದ…