ಫೆ. 2ರಂದು ಅನಾಥಾಶ್ರಮದಲ್ಲಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ನಟ ಚೇತನ್ -Vishwanews24
ಬೆಂಗಳೂರು: ಆ ದಿನಗಳು ಚಿತ್ರ ಖ್ಯಾತಿಯ ನಟ ಚೇತನ್ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಫೆಬ್ರವರಿ 2ರಂದು ನಟ ಚೇತನ್ ವಲ್ಲಭ್ ನಿಕೇತನ ವಿನೋಭಾ ಭಾವೆ ಆಶ್ರಮದಲ್ಲಿ, ಸಂಜೆ 6 ಗಂಟೆಗೆ ಅನಾಥಾಶ್ರಮದ ಮಕ್ಕಳು ಹಾಗೂ ವೃದ್ಧರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳುತ್ತಿದ್ದಾರೆ.
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಮೇಘಾ ಮತ್ತು ಚೇತನ್ ಪರಸ್ಪರ ಪ್ರೀತಿಸುತ್ತಿದ್ದರು.
ಅನಾಥಶ್ರಮವೊಂದರಲ್ಲಿ ಸರಳವಾಗಿ ವಿವಾಹವಾಗಲಿದ್ದಾರೆ ಎಂದು ಚೇತನ್ ಆಪ್ತರು ತಿಳಿಸಿದ್ದಾರೆ. ಸರಳ ಮದುವೆ ಸಮಾರಂಭದಲ್ಲಿ ವಚನ ಗಾಯನ, ಸೂಫಿ ಗಾಯನ ಸೇರಿದಂತೆ ದೇಶಿ ನೃತ್ಯಗಳ ಕಾರ್ಯಕ್ರಮಗಳು ಇರಲಿವೆ.
ಈಗಾಗಲೇ ಚೇತನ್ ಕನ್ನಡ ಸಿನಿಮಾರಂಗದ ಗಣ್ಯರನ್ನು ಮದುವೆಗೆ ಆಮಂತ್ರಣ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಆಮಂತ್ರಣ ನೀಡಿರುವ ಬಗ್ಗೆ ಚೇತನ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
2007ರಲ್ಲಿ ಆ ದಿನಗಳು ಸಿನಿಮಾದ ಮೂಲಕ ಚೇತನ್ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮೊದಲ ಚಿತ್ರದಲ್ಲೇ ಚೇತನ್ ಭರವಸೆ ಮೂಡಿಸಿದ್ದರು. ಸಿನಿಮಾದ ಜೊತೆ ಜೊತೆಗೆ ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
