ಫೆ. 27ರಿಂದ ಮಾ. 1ರ ವರೆಗೆ ಮಂಗಳೂರು- ಮುಂಬಯಿ ರೈಲು ಸೇವೆಯಲ್ಲಿ ವ್ಯತ್ಯಯ – vishwanews24
ಫೆ. 27ರಿಂದ ಮಾ. 1ರ ವರೆಗೆ ಮಂಗಳೂರು- ಮುಂಬಯಿ ರೈಲು ಸೇವೆಯಲ್ಲಿ ವ್ಯತ್ಯಯ
ಮಂಗಳೂರು: ಮುಂಬಯಿ ರೈಲು ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ ವಿಸ್ತರಣೆಯ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ. 27ರಿಂದ ಮಾ. 1ರ ವರೆಗೆ ಮಂಗಳೂರು-ಮುಂಬಯಿ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಮಂಗಳೂರಿನಿಂದ ಹೊರಡುವ ನಂ. 12134 ಮಂಗಳೂರು ಜಂಕ್ಷನ್-ಸಿಎಸ್ಎಂಟಿ ಮುಂಬಯಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಸೇವೆ ಥಾಣೆಯವರೆಗೆ ಮಾತ್ರವೇ ಸಂಚರಿಸಲಿದೆ.
ಥಾಣೆಯಿಂದ ಮುಂಬಯಿ ನಡುವಿನ ಸೇವೆ ರದ್ದುಗೊಳ್ಳಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
