ಫೆ.6ರಿಂದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ : ಕರ್ನಾಟಕ ತಂಡದ ತರಬೇತುದಾರರಾಗಿ ಕಡಬದ ಅಬ್ದುಲ್ ಖಾದರ್ ಆಯ್ಕೆ -Vishwanews24

Featured, ದಕ್ಷಿಣ ಕನ್ನಡ

ಫೆ.6ರಿಂದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ : ಕರ್ನಾಟಕ ತಂಡದ ತರಬೇತುದಾರರಾಗಿ ಕಡಬದ ಅಬ್ದುಲ್ ಖಾದರ್ ಆಯ್ಕೆ -Vishwanews24

ಕಡಬ: ಫೆ.6ರಿಂದ 10ರ ವರೆಗೆ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಕರ್ನಾಟಕ ತಂಡದ ತರಬೇತುದಾರರಾಗಿ ಕಡಬದ ಅಬ್ದುಲ್ ಖಾದರ್ (ಕಲಂದರ್) ಅವರು ಆಯ್ಕೆಯಾಗಿದ್ದಾರೆ.

ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಯ ಪದಕವನ್ನು ಜಯಿಸಿ 36ನೇ ರಾಷ್ಟ್ರೀಯ ಜ್ಯೂನಿಯರ್ ವಿಭಾಗದ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಲಿರುವ ಪುತ್ತೂರಿನ ವಿವೇಕಾನಂದ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಚರಿತ್ ಪ್ರಕಾಶ್ ಇವರ ತರಬೇತುದಾರರಾಗಿ ಅಬ್ದುಲ್ ಖಾದರ್ ಕಡಬ ಇವರು ಭಾಗವಹಿಸಲಿದ್ದಾರೆ.

ಅತ್ತೂರು : ಫೆ. 14ರಂದು ಪರ್ಪಲೆಗಿರಿಯಲ್ಲಿ ಕಲ್ಕುಡ ಕಲ್ಲುರ್ಟಿ ತೂಕತ್ತರಿ ದೈವಗಳ ನೇಮೋತ್ಸವ -Vishwanews24

ಇವರು ಖ್ಯಾತ ಕಬಡ್ಡಿ ತರಬೇತುದಾರ ಹಾಗೂ ತೀರ್ಪುಗಾರರಾಗಿದ್ದು, ಇದೀಗ ಕರ್ನಾಟಕ ತಂಡದ ತರಬೇತುದಾರರಾಗಿ ಆಯ್ಕೆಯಾಗಿ ಫೆ.6 ರಂದು ಅಸ್ಸಾಂನ ಗುವಾಹಟಿಗೆ ತೆರಳಲಿದ್ದಾರೆ.

ಮಂಗಳೂರು: ಕಾಂಗ್ರೆಸ್ ಭವನದಲ್ಲಿ ಮಹಾತ್ಮ ಗಾಂಧಿ 73ನೇ ಪುಣ್ಯ ತಿಥಿ ಕಾರ್ಯಕ್ರಮ -Vishwanews24