ಫೋಟೋ ಶೂಟ್‍ಗೆ ತೆರಳಿದ್ದ ಕನಸು ನಿರ್ದೇಶಕ ಫಾಲ್ಸ್ ನಲ್ಲಿ ಮುಳುಗಿ ಸಾವು
ಮಂಗಳೂರು: ಮಹಾಮಳೆಗೆ ಮತ್ತೊಂದು ಬಲಿಯಾಗಿದೆ. ‘ಕನಸು’ ಚಲನಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ಎರ್ಮಾಯ್ ಫಾಲ್ಸ್ನಲ್ಲಿ ನೀರುಪಾಲಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನಲ್ಲಿರುವ ಎರ್ಮಾಯ್ ಫಾಲ್ಸ್ಗೆ ಸಂತೋಷ್ ಶೆಟ್ಟಿ ಸೇರಿ ಐದು ಜನ ಫೋಟೋ ಶೂಟ್‍ಗೆ ತೆರಳಿದ್ದರು. ಒಮ್ಮೆಲೇ ನೀರಿನ ಹರಿವು ಹೆಚ್ಚಾಗಿ ಸಂತೋಷ್ ನೀರಿಗೆ ಜಾರಿದ್ದಾರೆ.
ಕಾಲಿಗೆ ಭಾರ ಕಟ್ಟಿಕೊಂಡಿದ್ದ ಸಂತೋಷ್ ಫಾಲ್ಸ್ ಬಳಿ ನಟನೆ ನಿರತರಾಗಿದ್ದರು. ಜಾಕೆಟ್ ಹಾಕಿಕೊಂಡಿದ್ದರು. ಈ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಕಾಲಿಗೆ ಮೂರುವರೆ ಕೆಜಿಯಷ್ಟು ಭಾರದ ರೋಬಾಟ್ನಂಥ ವಸ್ತು ಕಟ್ಟಿಕೊಂಡಿದ್ದೇ ಬೀಳಲು ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಸಂತೋಷ್ ಮೃತದೇಹವನ್ನು ಹೊರ ತೆಗೆದಿದ್ದಾರೆ.
2015ರಲ್ಲಿ ‘ಕನಸು ಕಣ್ಣು ತೆರೆದಾಗ’ ಎಂಬ ಸಿನಿಮಾವನ್ನು ಸಂತೋಷ್ ನಿರ್ದೇಶಿಸಿದ್ರು. ಗಂಧದ ಕುಡಿ ಕನ್ನಡದಲ್ಲಿ, ಚಂದನ್ ವನ್ ಹಿಂದಿಯಲ್ಲಿ ಮಕ್ಕಳ ಚಿತ್ರವನ್ನು ಸಂತೋಷ್ ನಿರ್ದೇಶಿಸುತ್ತಿದ್ರು.
