ಬಂಗಾಳಕೊಲ್ಲಿಯಲ್ಲಿ ‘ಸೆನ್ಯಾರ್’ ಸೈಕ್ಲೋನ್ ಭೀತಿ: ರಾಜ್ಯಗಳಲ್ಲಿ ನ.27ರವರೆಗೆ ಭಾರೀ ಮಳೆ ಮುನ್ಸೂಚನೆ – vishwanews24
ಬಂಗಾಳಕೊಲ್ಲಿಯಲ್ಲಿ ‘ಸೆನ್ಯಾರ್’ ಸೈಕ್ಲೋನ್ ಭೀತಿ: ರಾಜ್ಯಗಳಲ್ಲಿ ನ.27ರವರೆಗೆ ಭಾರೀ ಮಳೆ ಮುನ್ಸೂಚನೆ
ಚೆನ್ನೈ : ಈ ಬಾರಿ ಚಂಡಮಾರುತಗಳ ಅಬ್ಬರ ಜೋರಾಗಿಯೇ ಇದೆ. ಕಳೆದ ಅಕ್ಟೋಬರ್‌ನಲ್ಲಿ ಮೋಂಥಾ ಚಂಡಮಾರುತಕ್ಕೆ ಸಾಕ್ಷಿಯಾಗಿದ್ದ ಬಂಗಾಳ ಕೊಲ್ಲಿಯಲ್ಲಿ ಇದೀಗ ಮತ್ತೊಂದು ಚಂಡಮಾರುತದ ಭೀತಿ ಶುರುವಾಗಿದೆ.
ಪ್ರಸಕ್ತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಸಮೀಪದ ಮಲಕ್ಕಾ ಜಲಸಂಧಿ ಬಳಿ ವಾಯುಭಾರ ಕುಸಿತ ಉಂಟಾಗಿದೆ. ಇದು ಮುಂದಿನ ವಾರದ ವೇಳೆಗೆ ತೀವ್ರ ಸ್ವರೂಪ ಪಡೆದುಕೊಂಡು ಚಂಡಮಾರುತವಾಗಿ ಬದಲಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಒಂದು ವೇಳೆ ಚಂಡಮಾರುತ ರೂಪುಗೊಂಡರೆ ಅದಕ್ಕೆ ಸೆರ್ನ್ಯಾ (ಸಿಂಹ) ಎಂದು ಹೆಸರಿಡಲಾಗುವುದು. ಚಂಡಮಾರುತ ರೂಪುಗೊಂಡರೆ ಅದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ನವೆಂಬರ್ 27ರವರೆಗೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಗೆ ಕಾರಣವಾಗಲಿದೆ.
ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೆ ಅದರಂತೆ ನಡೆದುಕೊಳ್ಳುತ್ತೇನೆ : ಸಿಎಂ ಸಿದ್ದರಾಮಯ್ಯ – vishwanews24
