ಬಂಟ್ವಾಳ: ಅಕ್ರಮ ಜಾನುವಾರು ಸಾಗಾಟ : – ಆರೋಪಿಗಳನ್ನು ಪೋಲೀಸರಿಗೆ ಒಪ್ಪಿಸಿದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು – Vishwanews24
ಬಂಟ್ವಾಳ: ಅಕ್ರಮ ಜಾನುವಾರು ಸಾಗಾಟ : – ಆರೋಪಿಗಳನ್ನು ಪೋಲೀಸರಿಗೆ ಒಪ್ಪಿಸಿದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು
ಬಂಟ್ವಾಳ/ವಿಟ್ಲ : ಅಕ್ರಮವಾಗಿ ಸಾಗಾಟ ಮಾಡುವ ಉದ್ದೇಶದಿಂದ ಕರುವೊಂದನ್ನು ರಿಕ್ಷಾ ಟೆಂಪೋದಲ್ಲಿ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಕರು ಸಹಿತ ಆರೋಪಿಗಳನ್ನು ಪೋಲೀಸರಿಗೆ ಒಪ್ಪಿಸಿದ ಘಟನೆ ತೆಂಕಬೆಳ್ಳೂರು ಎಂಬಲ್ಲಿ ನಡೆದಿದೆ.
ಕಲ್ಲಗುಡ್ಡೆಯಿಂದ ಅಮ್ಮುಂಜೆಗೆ ಸಾಗಿಸುತ್ತಿದ್ದ ವೇಳೆ ತೆಂಕಬೆಳ್ಳೂರು ಎಂಬಲ್ಲಿ ಕಾರ್ಯಕರ್ತರು ಅಡ್ಡ ಹಾಕಿ ಆರೋಪಿಗಳಾದ ಗೋಪಾಲ್ ಹಾಗೂ ರಫೀಜ್ ಎಂಬವರನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ. ವಿಟ್ಲದಲ್ಲಿಯೂ ದಾಳಿ ನಡೆಸಿದ ಸಂಘಟನೆಯ ಕಾರ್ಯ ಕರ್ತರು ಕರು ಸಹಿತ ಆರೋಪಿಗಳನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ.

ಮಹಮ್ಮದ್ ಹಾಗೂ ಮಸೂದ್ ಎಂಬ ಇಬ್ಬರು ಆರೋಪಿಗಳು ಕರುವನ್ನು ಸಾಗಿಸುತ್ತಿದ್ದ ವೇಳೆ ಕನ್ಯಾನ ಎಂಬಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಬಳಿಕ ಪೋಲೀಸರಿಗೆ ಒಪ್ಪಿಸಿದ್ದಾರೆ.
