ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೇಟ್ ಪಡೆದು ಇಂದು ನಾಮಪತ್ರ ಸಲ್ಲಿಸಿರುವ ಬೈಂದೂರು ತಾಲೂಕು ಬಿಜೂರು ನಿವಾಸಿ ಗುರುರಾಜ್ ಶೆಟ್ಟಿ ಗಂಟಿಹೊಳೆ (42)ಒಟ್ಟು ಆದಾಯ 7.63 ಕೋಟಿ ರೂ. ಆಗಿದ್ದರೆ, ಪತ್ನಿ ಅನುರಾಧ ಶೆಟ್ಟಿ ಅವರ ಆದಾಯ 2.12 ಕೋಟಿ ರೂ.ಎಂದು ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿದವತ್‌ನಲ್ಲಿ ತಿಳಿಸಲಾಗಿದೆ
ಗುರುರಾಜ್ ಅವರ ಬಳಿ 1,76,844 ರೂ. ಚರಾಸ್ಥಿ ಇದ್ದರೆ, ಸ್ಥಿರಾಸ್ಥಿಯ ಮೌಲ್ಯ 7,61,40,000ರೂ. ಆಗಿದೆ. ಇದರಲ್ಲಿ ಪಿತ್ರಾರ್ಜಿತ ಆಸ್ತಿಯ ಮೌಲ್ಯ 32,70,000 ರೂ. ಆಗಿದ್ದರೆ, ಸ್ವಯಾರ್ಜಿತ ಆಸ್ತಿ ಮೌಲ್ಯ 7,28,70,00ರೂ. ಎಂದು ತಿಳಿಸಲಾಗಿದೆ.
ಗುರುರಾಜರ ಪತ್ನಿ ಅನುರಾಧ ಅವರಲ್ಲಿ 18,74,166 ರೂ. ಚರಾಸ್ಥಿ ಇದ್ದರೆ, ಸ್ಥಿರಾಸ್ಥಿಯ ಮೌಲ್ಯ 1,93,50,000 ರೂ. ಆಗಿದೆ. ಅವರಲ್ಲಿ 8.65 ಲಕ್ಷ ರೂ. ಮೌಲ್ಯದ 346ಗ್ರಾಂ ಚಿನ್ನಾಭರಣಗಳಿವೆ. ಇಬ್ಬರ ಕೈಯಲ್ಲೂ 35,000 ಹಾಗೂ 70,000ರೂ.ನಗದು ಹಣವಿದೆ.
ಗುರುರಾಜ್ ಅವರು ವೈಯಕ್ತಿಕವಾಗಿ 1.64 ಕೋಟಿ ರೂ. ಸಾಲವನ್ನು ಹೊಂದಿದ್ದರೆ, 45ಶೇ. ಶೇರ್‌ನ್ನು ಹೊಂದಿರುವ ಶ್ರೀ ಕ್ಯಾಶ್ಯ ಫರ್ಮ್‌ನಲ್ಲಿ 9,10,63,000 ಸಾಲವನ್ನು ಹೊಂದಿದ್ದಾರೆ ಎಂದು ಅಫಿದವತ್‌ನಲ್ಲಿ ತಿಳಿಸಲಾಗಿದೆ.
ಗುರುರಾಜ್ ವಿರುದ್ಧ ಯಾವುದೇ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿಲ್ಲ. ಆದರೆ 2018ರಲ್ಲಿ ಆರು ಲಕ್ಷ ರೂ. ಮೊತ್ತದ ಚೆಕ್‌ಬೌನ್ಸ್ ಕೇಸಿನಲ್ಲಿ ಕುಂದಾಪುರ ನ್ಯಾಯಾಲಯ ಅವರಿಗೆ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದು, ಇದಕ್ಕೆ 2022ರಲ್ಲಿ ಕುಂದಾಪುರ ಜೆಎಂಎಫ್‌ಸಿ ನ್ಯಾಯಾಲಯ ದಿಂದ ತಡೆಯಾಜ್ಞೆ ಪಡೆಯಲಾಗಿದೆ. ಇದರ ವಿಚಾರಣೆ ಮೇ ತಿಂಗಳಲ್ಲಿ ನಡೆಯಲಿದೆ ಎಂದು ಅಫಿದವತ್‌ನಲ್ಲಿ ಹೇಳಲಾಗಿದೆ.
ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…
ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…
ಎಂಆರ್‌ಪಿಎಲ್ ದುರಂತ: ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…
ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…
ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ: ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ: ದಕ್ಷಿಣ ಕನ್ನಡ (ದ.ಕ)…