ಬಂಟ್ವಾಳ: ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ 9ನೇ ಬಾರಿ ಸ್ಪರ್ಧೆಗೆ ಇಳಿದಿರುವ ಮಾಜಿ ಸಚಿವ ಬಿ. ರಮಾನಾಥ ರೈ 5.15 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.
ನಾಮಪತ್ರದ ಜೊತೆ ಸಲ್ಲಿಸಿರುವ ಅಫಿಡಾವಿಟ್‌ನಲ್ಲಿ 36.25 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು 4.79 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ಪತ್ನಿ ಧನಭಾಗ್ಯ ಯಾನೆ ಶೈಲಾ ಆರ್ ರೈ ಅವರು 1 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದರೆ, ಪುತ್ರಿ ಚರಿಷ್ಮಾ ರೈ ಹೆಸರಲ್ಲಿ 99.04 ಲಕ್ಷ ರೂ. ಮತ್ತು ಪುತ್ರ ಚೈತ್ರದೀಪ್ ರೈ ಹೆಸರಲ್ಲಿ 25.85 ಲಕ್ಷ ರೂ. ಮೌಲ್ಯದ ಚರಾಸ್ತಿಗಳಿವೆ.
ರೈ ಕುಟಂಬದಲ್ಲಿ 9 ವಾಹನ: ರಮಾನಾಥ ರೈ ಕುಟುಂಬದಲ್ಲಿ 9 ವಾಹನಗಳು ಇವೆ. ರೈ ಹೆಸರಿನಲ್ಲಿ ಇನೋವಾ, ಟೊಯೇಟೊ ಮತ್ತು ಟಾಟಾ ಟಿಯಾಗೋ ಎಕ್ಸ್ ಝಡ್ ವಾಹನ ಇದೆ. ಪತ್ನಿ ಮತ್ತು ಪುತ್ರನ ಬಳಿ ವಾಹನ ಇಲ್ಲ. ಆದರೆ ಪುತ್ರಿ ಚರಿಷ್ಮಾ ಬಳಿ 7 ವಾಹನಗಳಿವೆ.
ರೈ ಅವರಲ್ಲಿ 6.15 ಲಕ್ಷ ರೂ. ಮೌಲ್ಯದ 110 ಗ್ರಾಂ ಚಿನ್ನ ಮತ್ತು 77 ಸಾವಿರ ರೂ. ಮೌಲ್ಯದ 1,000 ಗ್ರಾಂ ಬೆಳ್ಳಿ, ಪತ್ನಿ 72.73 ಲಕ್ಷ ರೂ. ಮೌಲ್ಯದ 1,300 ಗ್ರಾಂ ಚಿನ್ನ ಮತ್ತು 38,500 ಮೌಲ್ಯದ 500 ಗ್ರಾಂ ಬೆಳ್ಳಿ, ಪುತ್ರಿ ಬಳಿ 22.38 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ, 19,250 ರೂ. ಮೌಲ್ಯದ 250 ಗ್ರಾಂ ಬೆಳ್ಳಿ, ಪುತ್ರ ಬಳಿ 5.59 ಲಕ್ಷ ರೂ.ಮೌಲ್ಯದ 100 ಗ್ರಾಂ ಚಿನ್ನ ಮತ್ತು 7,700ರೂ.ಮೌಲ್ಯದ ಬೆಳ್ಳಿ ಇವೆ.
ಕುಟುಂಬದ ಸಾಲ 7.63 ಕೋಟಿ ರೂ. ರೈ 2.03 ಕೋಟಿ ರೂ, ಪತ್ನಿ 5.10 ಕೋಟಿ ರೂ ಮತ್ತು ಪುತ್ರಿ 50.50 ಲಕ್ಷ ರೂ. ಸಾಲದಲ್ಲಿದ್ದಾರೆ. ವಾರ್ಷಿಕ ಆದಾಯ 2021-22ರಲ್ಲಿ ರೈ ಅವರದ್ದು 22.15 ಲಕ್ಷ ರೂ, ಧನಭಾಗ್ಯ ರೈ 4.88 ಲಕ್ಷ ರೂ. ಮತ್ತು ಚರಿಷ್ಮಾ ರೈ 9.29 ಲಕ್ಷ ರೂ.
ಒಂದು ಪ್ರಕರಣ : 2018ರ ಚುನಾವಣೆ ವೇಳೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕರಿಗೆ ಹಣ ಹಂಚಲು ಹಣ ಸಂಗ್ರಹಿಸಿಟ್ಟ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…
ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್…
ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್ ವಾಹನ ಡಿಕ್ಕಿ : ಐವರು ದುರ್ಮರಣ ಕೊಪ್ಪಳ: ಗೂಡ್ಸ್ ವಾಹನವೊಂದು ಡಿವೈಡರ್ ದಾಟಿ ಓಮ್ನಿಗೆ…
ಮಲ್ಪೆ ಪ್ರಕರಣ: ಪ್ರಮೋದ್ ಮಧ್ವರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು ಬೆಂಗಳೂರು: ಕಳೆದ ವರ್ಷ ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡಿ…
ರಾಮ ಮಂದಿರದಲ್ಲಿ ಅವ್ಯವಹಾರದಂತಹ ಘೋರ ಅಪಚಾರಗಳು ನಡೆಯಬಾರದಿತ್ತು.. ಮಂದಿರದ ಅವ್ಯವಹಾರ ಆರೋಪಗಳು ಸತ್ಯವಾಗಿದ್ದರೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು : ಪೇಜಾವರ…