ಬಂಟ್ವಾಳ: ಕೆಲಸವೊಂದರ ಇಂಟರ್‌ವ್ಯೂ ಇದೆ ಎಂದು ಹೇಳಿ ಮನೆಯಿಂದ ಹೋದ ಯುವತಿ ನಾಪತ್ತೆ – Vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ: ಕೆಲಸವೊಂದರ ಇಂಟರ್‌ವ್ಯೂ  ಇದೆ ಎಂದು ಹೇಳಿ ಮನೆಯಿಂದ ಹೋದ ಯುವತಿ ನಾಪತ್ತೆ

ಬಂಟ್ವಾಳ: ತನಗೆ ಉದ್ಯೋಗಕ್ಕೆ ಸೇರ್ಪಡೆಯಾಗಲು ಇರುವ ಬಗ್ಗೆ ಇಂಟರ್‌ವ್ಯೂಗೆ ಲೆಟರ್ ಬಂದಿದ್ದು, ತಾನು ಇಂಟರ್‌ವ್ಯೂಗೆ ಹೋಗಿ ಬರುತ್ತೇನೆ ಎಂದು ಮನೆಮಂದಿಯಲ್ಲಿ ಹೇಳಿ ಹೋಗಿದ್ದ ಯುವತಿ ಮರಳಿ ಬಾರದೇ ನಾಪತ್ತೆಯಾಗಿದ್ದಾಳೆ.

ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಕಂಬಳಬೆಟ್ಟು ನಿವಾಸಿ ದಿವಂಗತ ಆನಂದ ಅವರ ಪುತ್ರಿ ಸುಶ್ಮಿತ ( 21) ನಾಪತ್ತೆಯಾದ ಯುವತಿ.

ನವೆಂಬರ್ 8 ರಂದು ಮಂಗಳವಾರ ಬೆಳಿಗ್ಗೆ ಮನೆಯಿಂದ ಮಂಗಳೂರಿನಲ್ಲಿ ಕೆಲಸವೊಂದರ ಇಂಟರ್‌ವ್ಯೂ ಇದೆ ಎಂದು ಹೇಳಿ ಮನೆಯಿಂದ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ.

ವಿಟ್ಲ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಈಕೆಯ ಹುಡುಕಾಟ ನಡೆಸುತ್ತಿದ್ದಾರೆ.

ನಾನು ಹೇಳಿದ್ದ ಹೇಳಿಕೆ ಹಿಂದೆ ಪಡೆಯುತ್ತಿದ್ದೇನೆ.. ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ : ಸತೀಶ್ ಜಾರಕಿಹೊಳಿ – Vishwanews24

Leave a Reply