ಬಂಟ್ವಾಳ : ಕೊರೊನಾ ಭೀತಿ – ಶ್ರೀ ಕ್ಷೇತ್ರ ಪೊಳಲಿ ಜಾತ್ರೆ ಸಾಂಕೇತಿಕವಾಗಿ ಆಚರಣೆ -Vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ : ಕೊರೊನಾ ಭೀತಿ – ಶ್ರೀ ಕ್ಷೇತ್ರ ಪೊಳಲಿ ಜಾತ್ರೆ ಸಾಂಕೇತಿಕವಾಗಿ ಆಚರಣೆ -Vishwanews24

ಸಂತೆ/ಅಂಗಡಿ ಇಡಲು ಅವಕಾಶವಿರುವುದಿಲ್ಲ..

 ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ..

ಬಂಟ್ವಾಳ, : ಕೊರೊನಾ ಭೀತಿ ಇರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಡಾ.ಬಿ ರಾಜೇಂದ್ರ ಅವರ ಆದೇಶಕ್ಕೆ ಅನುಗುಣವಾಗಿ ಈ ಬಾರಿ ಶ್ರೀ ಕ್ಷೇತ್ರ ಪೊಳಲಿಯ ಜಾತ್ರೆಯನ್ನು ಸಾಂಕೇತಿಕವಾಗಿ ಆಚರಿಸಿದರೆ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಮಾ.14ರಿಂದ ಏ.12 ರವರೆಗಿನ ಜಾತ್ರಾ ಮಹೋತ್ಸವ ಇರಲಿದ್ದು ಇದನ್ನು ಸಾಂಕೇತಿಕವಾಗಿ ನಡೆಸಲು ತೀರ್ಮಾನಿಸಲಾಗಿದೆ.

ಭಕ್ತರು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ದೇಗುಲದ ಜಾಗದಲ್ಲಿ ಸಂತೆ/ಅಂಗಡಿ ಇಡಲು ಅವಕಾಶವಿರುವುದಿಲ್ಲ ಎಂದು ಶ್ರೀ ಕೇತ್ರದ ಪ್ರಕಟನೆ ತಿಳಿಸಿದೆ.

ಉಡುಪಿ ,ದ.ಕ ಜಿಲ್ಲೆ ಸೇರಿದಂತೆ 8 ಜಿಲ್ಲೆಗಳಲ್ಲಿ ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಶೇ.50 ನಿರ್ಬಂಧ -Vishwanews24