ಬಂಟ್ವಾಳ : ಗದ್ದೆಯಲ್ಲಿ ನರ್ತೆ (ಚಿಪ್ಪು ಮೀನು) ಹೆಕ್ಕಲು ಹೋಗಿ ಕಾಲು ಜಾರಿ ಬಿದ್ದು ಕೆಸರಿನಲ್ಲಿ ಹೂತು ಯುವಕ ಸಾವು – Vishwanews24
ಬಂಟ್ವಾಳ : ಗದ್ದೆಯಲ್ಲಿ ನರ್ತೆ (ಚಿಪ್ಪು ಮೀನು) ಹೆಕ್ಕಲು ಹೋಗಿ ಕಾಲು ಜಾರಿ ಬಿದ್ದು ಯುವಕ ಸಾವು
ಬಂಟ್ವಾಳ: ಪೊಳಲಿ ಸಮೀಪದ ಕಲ್ಕುಟದ ಗದ್ದೆಯೊಂದರಲ್ಲಿ ನರ್ತೆ( ಶಂಕುಹುಳು) ಹೆಕ್ಕುವ ವೇಳೆ ಯುವಕನೋರ್ವ ನೀರು ಹಾಗೂ ಕೆಸರಿನಲ್ಲಿ ಹೂತು ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಕರಿಯಂಗಳ ಗ್ರಾಮದ ಸಾಣೂರುಪದವು ನಿವಾಸಿ ದಾಮೋದರ್(31) ಮೃತಪಟ್ಟ ಯುವಕ.

ದಾಮೋದರ್ ಗದ್ದೆಯ ಬದುವಿನಲ್ಲಿ ಕೂತು ನರ್ತೆ ಹೆಕ್ಕುತ್ತಿದ್ದ ವೇಳೆ ಆಯತಪ್ಪಿ ಗದ್ದೆಗೆ ಬಿದ್ದಿದ್ದಾರೆ. ಗದ್ದೆಯಲ್ಲಿ ನೀರಿನ ಜತೆಗೆ ಕೆಸರು ಕೂಡ ತುಂಬಿಕೊಂಡಿದ್ದು, ಈ ವೇಳೆ ಅವರ ಕುತ್ತಿಗೆವರೆಗೂ ಹೂತು ಹೋಗಿದ್ದಾರೆ. ಬಳಿಕ ಮೇಲಕ್ಕೆ ಬರಲು ಆಗದೆ ಮೃತಪಟ್ಟಿದ್ದಾರೆ.
ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದ ದಾಮೋದರ್ ಅವರು ತಂದೆ-ತಾಯಿ, ಪತ್ನಿ, ಸಣ್ಣ ಮಗು ಸೇರಿದಂತೆ ಕುಟುಂಬ ವರ್ಗವನ್ನು ಅಗಲಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
