ಬಂಟ್ವಾಳ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿರುವ ಜಾನುವಾರುಗಳ ಚರ್ಮಗಂಟು ರೋಗ ಇದೇ ಮೊದಲ ಬಾರಿಗೆ ದ.ಕ.ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಒಂದೇ ಮನೆಯ ಮೂರು ದನಗಳಲ್ಲಿ ಶಂಕಿತ ಪ್ರಕರಣ ಪತ್ತೆಯಾಗಿದೆ.
ಅದರಲ್ಲಿ ಒಂದು ದನ ಈಗಾಗಲೇ ಮೃತಪಟ್ಟಿದ್ದು, ಎರಡು ದನಗಳು ಚಿಕಿತ್ಸೆಯ ಬಳಿಕ ಬಹುತೇಕ ಗುಣಮುಖವಾಗಿವೆ.
ದ.ಕ.ಜಿಲ್ಲಾ ಪಶು ಪಾಲನ ಇಲಾಖೆಯ ಮಾಹಿತಿ ಪ್ರಕಾರ ಬಿಳಿಯೂರಿನ ಮಲ್ಲಡ್ಕದಲ್ಲಿ ಕಾಣಿಸಿಕೊಂಡ ಶಂಕಿತ ಪ್ರಕರಣಕ್ಕೆ ಅ. 8ರಿಂದ ಕೆಎಂಎಫ್ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಒಂದು ದನ ಅ. 11ರಂದು ಮೃತಪಟ್ಟಿದೆ. ಆದರೆ ಉಳಿದ 2 ದನಗಳು ಬಹುತೇಕ ಗುಣಮುಖವಾಗಿವೆ. ದನ ಚರ್ಮಗಂಟು ರೋಗ ದಿಂದ ಸತ್ತಿಲ್ಲ, ಅದಕ್ಕೆ ಬೇರೆ ಕಾಯಿಲೆಯೂ ಇತ್ತು ಎನ್ನಲಾಗಿದೆ.
ಪಿಎಂ ಕಿಸಾನ್ ಸಮ್ಮಾನ್ – ಉಡುಪಿಯ 1.5 ಲಕ್ಷ ರೈತರಿಗೆ ಅನುದಾನ: ಶೋಭಾ ಕರಂದ್ಲಾಜೆ – Vishwanews24
ಈ ಖಾಯಿಲೆಯ ಮುಂಜಾಗ್ರತ ಕ್ರಮವಾಗಿ ಪ್ರಕರಣ ಕಂಡುಬಂದ ಮನೆಯ ಸುತ್ತಲೂ ಸೇರಿದಂತೆ ಗ್ರಾಮದ ಬಹುತೇಕ ಜಾನುವಾರುಗಳಿಗೆ ಎಲ್‌ಎಸ್‌ಡಿ ಲಸಿಕೆ ನೀಡಲಾಗಿದ್ದು, ಜತೆಗೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಕಾರ್ಯವನ್ನೂ ಮಾಡಲಾಗಿದೆ. ಜತೆಗೆ ಪ್ರದೇಶದ ಮನೆಗಳಿಗೆ ಮುಂಜಾಗ್ರತ ಕ್ರಮಗಳನ್ನೂ ತಿಳಿಸಲಾಗಿದೆ.
ಬಿಳಿಯೂರು ಪ್ರದೇಶದಲ್ಲಿ ಸುಮಾರು 600 ದನಗಳಿಗೆ ಲಸಿಕೆಗಳನ್ನು ನೀಡಲಾಗಿದ್ದು, ಉಳಿದಂತೆ ಜಿಲ್ಲೆಗೆ ಪೂರೈಕೆಯಾಗಿ ರುವ 2000 ಲಸಿಕೆಗಳಲ್ಲಿಗೋಶಾಲೆಗಳ ದನಗಳಿಗೆ ನೀಡುವ ಕಾರ್ಯಮಾಡಲಾಗಿದೆ. ಸತ್ತಿರುವ ದನದ ಕುರಿತು ಇಲಾಖೆಯು ಸರಕಾರಕ್ಕೆ ವರದಿ ನೀಡಿದ್ದು, 20 ಸಾವಿರ ರೂ. ಪರಿಹಾರ ಸಿಗುವ ಸಾಧ್ಯತೆ ಇದೆ.
ಬಿಳಿಯೂರಿನಲ್ಲಿ ಜಿಲ್ಲೆಯ ಮೊದಲ ಶಂಕಿತ ಪ್ರಕರಣ ಕಂಡುಬಂದಿದ್ದು, ಈಗಾಗಲೇ ಸುತ್ತಮುತ್ತಲ ಪ್ರದೇಶದಲ್ಲಿ ಲಸಿಕೆ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಕಾರ್ಯವನ್ನು ನಡೆಸಿದ್ದೇವೆ. ಜಿಲ್ಲೆಗೆ ಬಂದಿರುವ 2 ಸಾವಿರ ಲಸಿಕೆಗಳನ್ನು ಈಗಾಗಲೇ ನೀಡಲಾಗಿದ್ದು, ಹೆಚ್ಚಿನ ಲಸಿಕೆಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಜತೆಗೆ ಸತ್ತಿರುವ ದನಕ್ಕೆ ಸರಕಾರದಿಂದ ಸಿಗುವ ಪರಿಹಾರಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ.– ಅರುಣ್‌ಕುಮಾರ್ ಶೆಟ್ಟಿ ಉಪನಿರ್ದೇಶಕರು, ಪಶು ಪಾಲನಾ ಇಲಾಖೆ. ದ.ಕ.ಜಿಲ್ಲೆ
ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…
ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…
ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ ಬೆಂಗಳೂರು: ಕರ್ನಾಟಕ ಸರ್ಕಾರದ…
ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ ಉಡುಪಿ: ಯುವಜನರು ನಿರಂತರ ಪ್ರಯತ್ನದ…
ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಸಾಗಾಟ.. ಮಂಗಳೂರು ಸಿಸಿಬಿ ಬಲೆಗೆ ಮೂವರು ಆರೋಪಿಗಳು; ₹1.58 ಕೋಟಿ ಮೌಲ್ಯದ ಸೊತ್ತು…
ಮಂಗಳೂರು: ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಂಗಳೂರು: ಅನುಮಾನಾಸ್ಪದ…