Featured

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಯುವಕನ ಶವ ಪತ್ತೆ  – Vishwanews24

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಯುವಕನ ಶವ ಪತ್ತೆ

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ತಾಲೂಕಿನ ಸಜೀಪ ನಿವಾಸಿ ರಾಜೇಶ್‌ ಪೂಜಾರಿ ಸ್ಥಾನದ ಮನೆ ಎಂದು ತಿಳಿದು ಬಂದಿದೆ. ರಾಜೇಶ್ ಪೂಜಾರಿ ಸಾವಿಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.

ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ದ್ವಿ ಚಕ್ರ ವಾಹನವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಸಂಶಯಗೊಂಡು ಪಾಣೆಮಂಗಳೂರು ಸೇತುವೆಯಲ್ಲಿ ಸಂಚರಿಸುವ ವಾಹನ ಸವಾರರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ ನೇತ್ರಾವತಿ ನದಿಗೆ ಯಾರೋ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಅಂದಾಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ತಂಡ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಬಳಿಕ ರಾಜೇಶ್ ಪೂಜಾರಿಯ‌ ಮೃತದೇಹ ಪತ್ತೆಯಾಗಿದೆ. ಆ ಬಳಿಕ ಸಾರ್ವಜನಿಕರಲ್ಲಿ ಸಾವಿನ ಬಗ್ಗೆ ಊಹಾಪೋಹಗಳು ಸಂದೇಹಗಳು ಹುಟ್ಟಿ ಕೊಂಡಿದೆ.

ರಾಜೇಶ್ ಸಜೀಪ ಮನೆಯಿಂದ ಬರುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ವೇಳೆ ಹಳೆಯ ಪಾಣೆಮಂಗಳೂರು ಸೇತುವೆಯಲ್ಲಿ ದ್ವಿ ಚಕ್ರ ವಾಹನಕ್ಕೆ ಡಿಕ್ಕಿಯಾಗಿ ನೇತ್ರಾವತಿ ನದಿಗೆ ಬಿದ್ದು ಸಾವನ್ನಪ್ಪಿರಬಹುದಾ? ಎಂಬ ಸಂದೇಹ ವ್ಯಕ್ತವಾಗಿದೆ.

ದ್ವಿಚಕ್ರ ವಾಹನ ಅಪಘಾತವಾದ ಬಗ್ಗೆ ಸಂಶಯಗಳು ವ್ಯಕ್ತವಾಗಿದ್ದು, ಪೊಲಿಸರು ತನಿಖೆ ಆರಂಭಿಸಿದ್ದಾರೆ.ರಾಜೇಶ್‌ ಸಾವಿಗೆ ಇನ್ನಾವುದೋ ಕಾರಣವಿರಬಹುದಾ ? ಎಂಬ ಬಗ್ಗೆಯೂ ಪೋಲೀಸರು ತನಿಖೆಗೆ ಮುಂದಾಗಿದ್ದಾರೆ.

Vishwa News 24

Recent Posts

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ – vishwanews24

ಸುಳ್ಯ:  ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…

18 hours ago

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಸಿಎಂ  – vishwanews24

ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ  ಬೆಂಗಳೂರು: ನನಗೆ ಮದ…

19 hours ago

ಎಚ್ಚರ ತಪ್ಪಿದರೆ ಎಂಆರ್‌ಪಿಎಲ್ ಯಾವತ್ತಿಗೂ ಜೀವಂತ ಜ್ವಾಲಾಮುಖಿ: ಸತ್ಯಜಿತ್ ಸುರತ್ಕಲ್ – vishwanews24

ಎಂಆರ್‌ಪಿಎಲ್‌ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…

20 hours ago

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ – vishwanews24

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…

20 hours ago

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

20 hours ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

20 hours ago