ಬಂಟ್ವಾಳ : ಭೀಕರ ರಸ್ತೆ ಅಪಘಾತ :  ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ; ಸವಾರರಿಬ್ಬರು ಸ್ಥಳದಲ್ಲೇ ಸಾವು -Vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ : ಭೀಕರ ರಸ್ತೆ ಅಪಘಾತ :  ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ; ಸವಾರರಿಬ್ಬರು ಸ್ಥಳದಲ್ಲೇ ಸಾವು -Vishwanews24

ಬಂಟ್ವಾಳ :  ಟಿಪ್ಪರ್‌ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬಂಟ್ವಾಳದ ಸಿದ್ದಕಟ್ಟೆ ಸಮೀಪದ ಸೋರ್ನಾಡು ಎಂಬಲ್ಲಿ ನಡೆದಿದೆ.ಮೃತರನ್ನು ನಿತಿನ್ ಹಾಗೂ ಶಶಿರಾಜ್ ಎಂದು ಗುರುತಿಸಲಾಗಿದೆ.

ಸಿದ್ದಕಟ್ಟೆಯಿಂದ ಬಿ.ಸಿರೋಡು ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಸಿದ್ದಕಟ್ಟೆ ಸಮೀಪದ ಸೋರ್ನಾಡು ಬಳಿ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ನೇರವಾಗಿ ಬೈಕ್‌ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕಿನಲ್ಲಿದ್ದ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಡಿದ್ದಾರೆ. ಬೈಕ್ ಸಂಪೂರ್ಣ ಜಖಂಗೊಂಡಿದೆ.

Leave a Reply