Featured

ಬಂಟ್ವಾಳ : ಯುವಕರನ್ನು ಪಕ್ಷಕ್ಷೆ ಆಕರ್ಷಿಸುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕಾರ್ಯ ಆಗಬೇಕು : ವಿನಯ್‌ ಕುಮಾರ್ ಸೊರಕೆ – Vishwanews24

ಬಂಟ್ವಾಳ : ಯುವಕರನ್ನು ಪಕ್ಷಕ್ಷೆ ಆಕರ್ಷಿಸುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕಾರ್ಯ ಆಗಬೇಕು : ವಿನಯ್‌ ಕುಮಾರ್ ಸೊರಕೆ – Vishwanews24

ಬಂಟ್ವಾಳ : ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ವಿಚಾರ ಮಂಥನ ಆಗಬೇಕು, ವಿರೋಧ ಪಕ್ಷದವರನ್ನು ಎದುರಿಸುವ ಬಲಿಷ್ಠ ಸೈನ್ಯ ನಮ್ಮಲ್ಲಿರಬೇಕು, ಯುವಕರನ್ನು ಪಕ್ಷಕ್ಷೆ ಆಕರ್ಷಿಸುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕಾರ್ಯ ಆಗಬೇಕು ಎಂದು ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.

ಯುವ ಕಾಂಗ್ರೆಸ್ ಪಾಣೆಮಂಗಳೂರು ಬ್ಲಾಕ್ ವತಿಯಿಂದ ಸೋಮವಾರ ಸಂಜೆ ಮೊಡಂಕಾಪುವಿನ ಚರ್ಚ್ ಸಭಾಂಗಣದಲ್ಲಿ ನಡೆದ ಯುವ ಚೈತನ್ಯ ಕಾರ್ಯಗಾರ ಹಾಗೂ ಬೂತ್ ಹಾಗೂ ಗ್ರಾಮ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲ ಜಾತಿ, ಧರ್ಮ, ಭಾಷೆ, ಸಂಸ್ಕೃತಿಯ ಜನರನ್ನು ಒಟ್ಟು ಸೇರಿಸುವ ಜೊತೆಗೆ ಜನರ ಬದುಕು ಕಟ್ಟುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದ್ದರೆ, ಧರ್ಮ, ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಂಟ್ವಾಳ ಕ್ಷೇತ್ರದಲ್ಲಿ ರಮನಾಥ ರೈ ಮಾಡಿದ ಅಭಿವೃದ್ದಿ ಕಾರ್ಯಕ್ರಮಗಳನ್ನು ಮರೆ ಮಾಚಲು ಯಾರಿಂದಲೂ ಸಾಧ್ಯವಿಲ್ಲ. ಭಾವನಾತ್ಮಕ ವಿಚಾರಗಳ ಮೂಲಕ ಜನರನ್ನು ಮರಳು ಗೊಳಿಸಲಾಗುತ್ತಿದೆ, ಜಾತ್ಯತೀತ ಶಕ್ತಿ ಕ್ಷೀಣಿಸಿದಾಗ ಕೋಮುಶಕ್ತಿಗಳು ಬಲಗೊಳ್ಳುತ್ತದೆ ಎಂದರು. ಇದೇ ಸಂದರ್ಭ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿದರು..

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಮಾತನಾಡಿ ಮನುವಾದವನ್ನು ಸಮಾಜದಲ್ಲಿ ಜಾರಿಗೊಳಿಸಲು ಗಾಂಧೀಜಿಯ ಹತ್ಯೆಯಾಯಿತು. ಇಂದಿಗೂ ನಮ್ಮ ನಡುವೆ ಮನುವಾದಿಗಳು, ಗೋಡ್ಸೆವಾದಿಗಳು ಇದ್ದಾರೆ. ಇಂತವರ ವಿರುದ್ಧ ಸೈದ್ದಾಂತಿಕ ಹೋರಾಟ ಮಾಡಬೇಕಾಗಿದೆ. ಸಂವಿಧಾನ ವಿರೋಧಿಗಳನ್ನು ನಾವು ಎಂದಿಗೂ ವಿರೋಧಿಸುತ್ತೇವೆ ಎಂದು ತಿಳಿಸಿದರು.

Vishwa News 24

Recent Posts

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ – vishwanews24

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…

16 hours ago

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ – vishwanews24

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…

16 hours ago

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ – vishwanews24

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…

17 hours ago

ಉಡುಪಿ : ವ್ಯಕ್ತಿ ನಾಪತ್ತೆ – vishwanews24

ಉಡುಪಿ : ವ್ಯಕ್ತಿ ನಾಪತ್ತೆ      ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…

17 hours ago

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ – vishwanews24

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…

17 hours ago

ಉಡುಪಿ : ಜು. 10 ರಂದು ನೇರ ಸಂದರ್ಶನ – vishwanews24

ಉಡುಪಿ : ಜು. 10 ರಂದು ನೇರ ಸಂದರ್ಶನ      ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ‍್ಸ್ ಬಿಲ್ಡಿಂಗ್s…

17 hours ago