ಬಂಟ್ವಾಳ: ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಪಲ್ಟಿ ;  ಚಾಲಕ ಸಾವು – Vishwanews24

Featured, ದಕ್ಷಿಣ ಕನ್ನಡ

ಬಂಟ್ವಾಳ: ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಪಲ್ಟಿ ;  ಚಾಲಕ ಸಾವು

ಬಂಟ್ವಾಳ: ರೋಗಿಯನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್ ವಾಹನವೊಂದು ಸಮೀಪದ ವಗ್ಗ ಎಂಬಲ್ಲಿ ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಶುಕ್ರವಾರದಂದು ನಡೆದಿದೆ.

ಮೃತ ಚಾಲಕ ಮಡಂತ್ಯಾರು ಮಾಲಾಡಿ ನಿವಾಸಿ ಶಬೀರ್ ಗುರುತಿಸಲಾಗಿದೆ. ಬೆಳ್ತಂಗಡಿಯಿಂದ ಮಂಗಳೂರು ಕಡೆಗೆ ರೋಗಿಯನ್ನು ಸಾಗಿಸುತ್ತಿದ್ದ ವೇಳೆ ಬಂಟ್ವಾಳ ಸಮೀಪದ ವಗ್ಗ ಎಂಬಲ್ಲಿ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಪಲ್ಟಿಯಾಗಿ ಉರುಳಿಬಿದ್ದಿದೆ.

ಉಡುಪಿ:  ಹರೀಶ್ ಸಾಲಿಯಾನ್ ಬಿಜೆಪಿಯಿಂದ ಉಚ್ಛಾಟನೆ – Vishwanews24

ಅಪಘಾತದಲ್ಲಿ ಗಂಭೀರ ಗಾಯಗೊಂಡ ಚಾಲಕನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚಾಲಕ ಸಾವನ್ನಪ್ಪಿದ್ದಾನೆ. ಇನ್ನು ಅಂಬ್ಯಲೆನ್ಸ್‌ ನಲ್ಲಿದ್ದ ರೋಗಿಯನ್ನ ಬದಲಿ ವಾಹನದಲ್ಲಿ ಮಂಗಳೂರಿಗೆ ಶಿಫ್ಟ್ ಮಾಡಲಾಯಿತು.

ಉಡುಪಿ:  ಹರೀಶ್ ಸಾಲಿಯಾನ್ ಬಿಜೆಪಿಯಿಂದ ಉಚ್ಛಾಟನೆ – Vishwanews24

Leave a Reply