ಬಜೆಟ್ 2021 : ಭಾರತದ ಆತ್ಮವಿಶ್ವಾಸವನ್ನು ಜಗತ್ತಿಗೆ ಎತ್ತಿ ತೋರಿಸುತ್ತಿದೆ : ಪ್ರಧಾನಿ ಮೋದಿ -Vishwanews24
ಬಜೆಟ್ 2021 : ಭಾರತದ ಆತ್ಮವಿಶ್ವಾಸವನ್ನು ಜಗತ್ತಿಗೆ ಎತ್ತಿ ತೋರಿಸುತ್ತಿದೆ : ಪ್ರಧಾನಿ ಮೋದಿ -Vishwanews24
ನವದೆಹಲಿ: ಬಜೆಟ್ ಮಂಡನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಕಲಾಪದಲ್ಲಿ ಮಾತನಾಡಿ.. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಇಂದಿನ ಬಜೆಟ್ ಭಾರತದ ಆತ್ಮವಿಶ್ವಾಸವನ್ನು ಜಗತ್ತಿಗೆ ಎತ್ತಿ ತೋರಿಸುತ್ತಿದೆ. ದೇಶದ ಆತ್ಮವಿಶ್ವಾಸವನ್ನ ಹೆಚ್ಚಿಸುತ್ತದೆ. ಬಜೆಟ್ ಸ್ವಾವಲಂಬನೆಯ ದೃಷ್ಟಿ ಕೋನವನ್ನ ಹೊಂದಿದೆ. ಸಮಾಜದ ಪ್ರತಿ ನಾಗರಿಕನಿಗೂ ಬಜೆಟ್ ಸಹಾಯಕವಾಗಲಿದೆ ಅಂತಾ ಹೇಳಿದರು.
ಮಂಗಳೂರು: ರೆಸ್ಟೊರೆಂಟ್‌ನಲ್ಲಿ ಯುವತಿಯ ಮೇಲೆ ದಾಳಿ ಪ್ರಕರಣ : ಮೂವರ ಬಂಧನ -Vshwanews24
ಈ ಬಜೆಟ್ ರೈತರ ಆದಾಯವನ್ನ ಹೆಚ್ಚಿಸಲು ಒತ್ತು ನೀಡಲಾಗಿದೆ. ರೈತರು ಸುಲಭವಾಗಿ ಸಾಲವನ್ನ ಪಡೆದುಕೊಳ್ಳಬಹುದುಗಾಗಿದೆ. ಕೃಷಿ ಮೂಲಸೌಕರ್ಯ ನಿಧಿಯ ಸಹಾಯದಿಂದ ಎಪಿಎಂಸಿ ಮಾರುಕಟ್ಟೆಗಳನ್ನು ಬಲಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಅಸಾಧಾರಣ ಸನ್ನಿವೇಶಗಳ ಮಧ್ಯೆ 2021ರ ಬಜೆಟ್ ಅನ್ನು ಪ್ರಸ್ತುತಪಡಿಸಲಾಗಿದೆ. ಜಗತ್ತಿನಲ್ಲಿ ಸೃಷ್ಟಿಸಿದ ಕೊರೊನಾ ಮಾರಿ ಮನುಕುಲವನ್ನ ಬೆಚ್ಚಿಬೀಳಿಸಿದೆ. ಈ ಸನ್ನಿವೇಶಗಳ ಮಧ್ಯೆ, ಇಂದಿನ ಬಜೆಟ್ ಭಾರತದ ವಿಶ್ವಾಸವನ್ನು ತೋರಿಸುತ್ತಿದೆ ಅಂತಾ ಹೇಳಿದರು.
