kaup: ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಐಕಳಬಾವ ಡಾ ದೇವಿಪ್ರಸಾದ್ ಶೆಟ್ಟಿ ಇವರ ನೇತೃತ್ವದಲ್ಲಿ ಕೊರೋನ ಲಾಕ್‌ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕಿಡಾಗಿರುವ ಸುಮಾರು ಒಂದು ಸಾವಿರ ಕುಟುಂಬಗಳಿಗೆ ದಾನಿಗಳಿಂದ ಸಂಗ್ರಹಿಸಿ ಪಡಿತರ ಕಿಟ್ ವಿತರಿಸಲಾಯಿತು.ಮತ್ತು ಡಾ.ಬಿ.ಆರ್ ಅಂಬೆಡ್ಕರ್ ಜನ್ಮ ದಿನದ ಅಂಗವಾಗಿ ಪರಿಶಿಷ್ಟ ಪಂಗಡದ ಕುಟುಂಬದವರೊAದಿಗೆ ಯುಗಾದಿ ಹಬ್ಬ ಆಚರಿಸಿ ಅವರಿಗೆ ಧನ ಸಹಾಯ ಮತ್ತು ಯುಗಾದಿ ಕಿಟ್ ವಿತರಿಸಿ ಧೈರ್ಯ ತುಂಬುವ ಕಾರ್ಯ ಮಾಡಿದರು.
ಅಕ್ಕಿ ಬೆಲ್ಲ ಸೇರಿದಂತೆ ಸುಮಾರು ಒಂಭತ್ತು ಬಗೆಯ ಸೊತ್ತುಗಳನ್ನು ಖುದ್ದಾಗಿ ಪ್ಯಾಕ್ ಮಾಡಿ ಮನೆಮನೆಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತಾಡಿದ ಅವರು” ದೇಶದಲ್ಲಿ ಲಾಕ್‌ಡೌನ್ ಘೋಷನೆಯಾಗಿರುವ ಹಿನ್ನಲೆಯಲ್ಲಿ ಸುಮಾರು ಕುಟುಂಬಗಳು ಸಂಕಷ್ಟದಲ್ಲಿದೆ ಹಾಗಾಗಿ ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಮ್.ಎನ್ ರಾಜೇಂದ್ರ ಕುಮಾರ್, ಬಂಜರ ಪ್ರಕಾಶ್ ಶೆಟ್ಟಿ,ಪುತ್ತಿಗೆ ಶ್ರೀಗಳು ಸೇರಿದಂತೆ ಆತ್ಮೀಯ ಸ್ನೇಹಿತರ ಹಾಗೂ ದಾನಿಗಳ ಸಹಕಾರ ಪಡೆದು ಯಾವುದೇ ದುರುಪಯೋಗವಾಗದಂತೆ ಖುದ್ದಾಗಿ ಉತ್ತಮ ಗುಣ ಮಟ್ಟದ ಪಡಿತರ ಕಿಟ್ ತಯಾರು ಮಾಡಿ ಮನೆಮನೆಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದೇವೆ, ಪ್ರತಿದಿನ ನೂರು ಮನೆಗೆ ಮುಟ್ಟಿಸುವ ಕೆಲಸ ಆಗುತ್ತಿದೆ ಇದುವರೆಗೆ ಒಂದು ಸಾವಿರಕುಟುಂಬಗಳಗೆ ವಿತರಣೆ ಮಾಡಿದ್ದೇವೆ ಎಂದರು. ದೇಶಕ್ಕೆ ಆವರಿಸಿರುವ ಈ ಮಹಮಾರಿ ದೂರವಾಗಿ ಆದಷ್ಟು ಶೀಘ್ರವಾಗಿ ಹೊಸ ಜೀವನ ನಡೆಸುವಂತಾಗಲಿ, ಇಂತಹ ಸಂಕಷ್ಟದ ಸಮಯದಲ್ಲಿ ಉಳ್ಳವರು ಇಲ್ಲದವರಿಗೆ ಸೇವೆ ಮಾಡುವುದು ಧರ್ಮ ಮತ್ತು ಕರ್ತವ್ಯ ನಾವು ಮಾಡುತ್ತಿರುವುದು ದೇವರ ಕಾರ್ಯ ಎಂದರು.” ಕಿಟ್ ವಿತರಣೆ ಕಾರ್ಯದಲ್ಲಿ ಜಹೀರ್ ಅಹಮ್ಮದ್ ಸೇರಿದಂತೆ ಮೊದಲಾದವರು ಕೈ ಜೋಡಿಸಿದ್ದಾರೆ.
ಅರೆಂಜ್ ಅಲರ್ಟ್ ಹಿನ್ನೆಲೆ : ದ.ಕ ಜಿಲ್ಲೆಯಲ್ಲಿ ನಾಳೆ ( ಜು.3) ಶಾಲಾ ಕಾಲೇಜಿಗೆ ರಜೆ ಘೋಷಣೆ ಮಂಗಳೂರು :…
ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಇರುವುದಿಲ್ಲ: ಬೆಸ್ಕಾಂ ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಜುಲೈ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿ ; ಮೂವರು ಆರೋಪಿಗಳ ಬಂಧನ ಉಡುಪಿ: ಕಾರಿಗೆ ಫುಲ್…
ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಕಡತನಮಲೆ 6 ವರ್ಷ ಪಕ್ಷದಿಂದ ಉಚ್ಛಾಟನೆ ಬೆಂಗಳೂರು: ರಾಜ್ಯ ರೈತ…
ಕ್ವಾರಿ ದುರಂತ : ಅಧಿಕೃತ ವರದಿ ಪಡೆದ ಬಳಿಕ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ: ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: “ಮಾಗಡಿ…
ಅಬುಧಾಬಿಯಲ್ಲಿ ಲೋಕೋ ಪೈಲಟ್ ಆಗಿ ಕೊಡಗಿನ ರಿಯಾಝ್ ಮಡಿಕೇರಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾದ 'ಇತ್ತಿಹಾದ್' ರೈಲು ಸೇವೆಯ…