ಗದಗ: ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೋ ಮಾಡಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ.
ನಗರದ ಕರೆಮ್ಮಕಲ್ ಬಡಾವಣೆಯ ನಿವಾಸಿ ಸಂಪತ್ ದಂಡಗಿ (38) ಮೃತ ವ್ಯಕ್ತಿ. ಬಡ್ಡಿ ದಂಧೆಕೋರರ ಕಿರುಕುಳ ಮತ್ತು ಬೆದರಿಕೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಧರ್ಮಗೌಡ ಕರಿಯನಗೌಡ್ರ ಎಂಬಾತ ಹಣ ಮತ್ತು ಬಡ್ಡಿಗಾಗಿ ನಿರಂತರವಾಗಿ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ. ಸಂಪತ್ ಪತ್ನಿಗೂ ಕರೆ ಮಾಡಿ ಒತ್ತಡ ಹಾಕುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದಲ್ಲದೆ, ಧರ್ಮಗೌಡ ಕರಿಯನಗೌಡ್ರ ಹಾಗೂ ರವಿ ಶಿವನಗುತ್ತಿ ಎಂಬುವವರು ಸಂಪತ್‌ಗೆ ಕರೆ ಮಾಡಿ, ನಿನ್ನ ಮತ್ತು ನಿನ್ನ ಪತ್ನಿಯ ಹೆಸರಿನ ಚೆಕ್‌ಗಳಿವೆ. ಚೆಕ್ ಬೌನ್ಸ್ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಮೃತನ ಪತ್ನಿ ಮತ್ತು ತಾಯಿ ಆರೋಪಿಸಿದ್ದಾರೆ. ಈ ನಿರಂತರ ಕಿರುಕುಳದಿಂದ ಮನನೊಂದ ಸಂಪತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ನಾನು ಯಾವುದಕ್ಕೂ ಹೆದರುವುದಿಲ್ಲ ; ಡಿಸೆಂಬರ್‌ನಲ್ಲಿ ತಾಯ್ನಾಡಿಗೆ ಮರಳಲಿದ್ದೇನೆ : ಶೇಖ್ ಹಸೀನಾ ನವದೆಹಲಿ,:ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು, ಯಾವುದಕ್ಕೂ ನಾನು…
ಕೊಟೇಶ್ವರ ರಸ್ತೆ ಅಪಘಾತ : ಅತಿವೇಗ ಅಜಾಗರೂಕತೆಯ ಚಾಲನೆ ; ಬೈಕ್ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನ ಬಂಧನ ಉಡುಪಿ:…
ಮೈಸೂರು : ಅಕ್ಟೋಬರ್ 11ರಂದು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕೊನೆಗೂ ದಿನಾಂಕ…
ಚೆಕ್ ಬೌನ್ಸ್ ಪ್ರಕರಣ : ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳ ಜೈಲು ಶಿಕ್ಷೆ ನವದೆಹಲಿ: ಚೆಕ್ ಬೌನ್ಸ್…
ರೈಲಿನಲ್ಲಿ ಸಂಚರಿಸುವ ಮುನ್ನ ಹೊಸ ನಿಯಮ ತಿಳ್ಕೊಳ್ಳಿ : ಇನ್ಮುಂದೆ ಮೊಬೈಲ್ನಲ್ಲಿ ಟಿಕಟ್ ತೋರಿಸಿದರೆ ದಂಡ ಫಿಕ್ಸ್ ನವದೆಹಲಿ :ಡಿಜಿಟಲ್…
ಸುರತ್ಕಲ್ : ಅಕ್ರಮವಾಗಿ ನೆಲೆಸಿದ್ದ 6 ಮಂದಿ ಬಾಂಗ್ಲಾದೇಶಿಗರ ಪತ್ತೆ , ಗಡಿಪಾರಿಗೆ ಪೊಲೀಸರ ಸಿದ್ಧತೆ ಮಂಗಳೂರು: ನಗರದ ಸುರತ್ಕಲ್ ಪೊಲೀಸ್…