ಬದಲಾಯಿತು ಬಲೂನ್ ಮಾರುವ ಹುಡುಗಿಯ ಭವಿಷ್ಯ, ಬಡ ಹುಡುಗಿ ಮಾಡೆಲ್ ಆಗಿದ್ದು ಹೇಗೆ ? Vishwanews24

Featured, ರಾಷ್ಟ್ರ ನ್ಯೂಸ್

ಬದಲಾಯಿತು ಬಲೂನ್ ಮಾರುವ ಹುಡುಗಿಯ ಭವಿಷ್ಯ, ಬಡ ಹುಡುಗಿ ಮಾಡೆಲ್ ಆಗಿದ್ದು ಹೇಗೆ ?

ನವದೆಹಲಿ: ಜಾತ್ರೆಯಲ್ಲಿ ಬಲೂನ್ ಮಾರುತ್ತಿರುವ ಹುಡುಗಿಯೊಬ್ಬಳು ಪಯ್ಯನ್ನೂರು ಮೂಲದ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಕಣ್ಣಿಗೆ ಬಿದ್ದಿದ್ದು, ಇದೀಗ ಆಕೆಯ ಮೇಕ್ ಓವರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕಣ್ಣೂರು ಅಂದಲ್ಲೂರ್ಕಾವು ಉತ್ಸವದಲ್ಲಿ ಕಿಸ್ಬು ಎಂಬ ಹುಡುಗಿ ಬಲೂನ್ ಮಾರಾಟ ಮಾಡುತ್ತಿದ್ದ ವೇಳೆ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಅವರ ಕಣ್ಣಿಗೆ ಬಿದ್ದಿದ್ದು, ಆಕೆ ಆಕಾಶಬುಟ್ಟಿಗಳು ಮತ್ತು ದೀಪಗಳ ನಡುವೆ ನಿಂತಿದ್ದಳು. ಇದನ್ನೇ ಗಮನಿಸಿದ ಛಾಯಾಗ್ರಾಹಕ ಹುಡುಗಿಯ ಫೋಟೋ ಕ್ಲಿಕ್ಕಿಸಿದ್ದಾರೆ. ನಂತರ ಈ ಫೋಟೋವನ್ನು ಹುಡುಗಿಯಾ ತಾಯಿಗೂ ತೋರಿಸಲಾಗಿದ್ದು ಅವರು ಕೂಡಾ ಮಗಳ ಫೋಟೋ ನೋಡಿ ಸಂತೋಷ ಪಟ್ಟಿದ್ದಾರೆ.

https://www.instagram.com/p/Caj1YEwJNXD/?utm_source=ig_embed&utm_campaign=embed_video_watch_again

ಇನ್ನು ಎರಡು ದಿನಗಳ ನಂತರ ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋ ಶೇರ್ ಆದ ತಕ್ಷಣವೇ ಫೋಟೋಗೆ ಅದ್ಬುತ ಪ್ರತಿಕ್ರಿಯೆ ಸಿಕ್ಕಿದ್ದು, ಬಳಿಕ ಅರ್ಜುನ್ ಕಿಸ್ಬು ಜೊತೆ ಮೇಕ್ ಓವರ್ ಫೋಟೋ ಶೂಟ್ ಮಾಡಿಸಿದ್ದಾರೆ. ಸ್ಟೈಲಿಸ್ಟ್ ರಮ್ಯಾ ಅವರ ಸಹಾಯದಿಂದ ಅರ್ಜುನ್ ಕಿಸ್ಬು ಅವರ ಕೆಲವು ಸುಂದರವಾದ ಚಿತ್ರಗಳನ್ನು ಚಿತ್ರೀಕರಿಸಿದ್ದು ಸದ್ಯ ಈ ಪೋಟೊಗಳು ಸಖತ್ ವೈರಲ್ ಆಗಿದೆ.

ಈ ಪೋಟೊವನ್ನು ಗಮನಿಸಿ ಕಿಸ್ಬುಗೆ ಸಾಕಷ್ಟು ಆಫರ್ ಕೂಡ ಸಿಕ್ಕಿದ್ದು, ಅರ್ಜುನ್ 15 ವರ್ಷಗಳಿಂದ ಫ್ರೀಲಾನ್ಸ್ ವೆಡ್ಡಿಂಗ್ ಫೋಟೋಗ್ರಾಫರ್ ಆಗಿದ್ದಾರೆ.

ವಿದ್ಯುತ್‌ ಚಾಲಿತ ವಾಹನಗಳಿಗೆ ಉತ್ತೇ ಜನ ನೀಡಲು ರಾಜ್ಯಾದ್ಯಂತ ಒಂದು ಸಾವಿರ ರೀಚಾರ್ಜ್‌ ಕೇಂದ್ರಗಳ ಸ್ಥಾಪನೆ: ಸುನಿಲ್‌ ಕುಮಾರ್‌ – VIshwanews24

Leave a Reply