ಬದುಕಿನ‌ ಕೊನೆ ಉಸಿರಿರುವವರೆಗೆ ರಾಜ್ಯದ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ದುಡಿಯುತ್ತೇನೆ : ಸಿಎಂ BSY -Vishwanews24

Featured, ರಾಜ್ಯ ನ್ಯೂಸ್

ಬದುಕಿನ‌ ಕೊನೆ ಉಸಿರಿರುವವರೆಗೆ ರಾಜ್ಯದ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ದುಡಿಯುತ್ತೇನೆ : ಸಿಎಂ BSY -Vishwanews24

ಶಿವಮೊಗ್ಗ : ಬದುಕಿನ‌ ಕೊನೆ ಉಸಿರಿರುವವರೆಗೆ ರಾಜ್ಯದ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ದುಡಿಯುತ್ತೇನೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಬಿಎಸ್​ವೈ ಅಭಿಮಾನಿ ಬಳಗ ಆಯೋಜಿಸಿದ್ದ‌ ‘ನಮ್ಮೊಲುಮೆ ಭಾವಾಭಿನಂದನೆ’ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ, ಮಂಡ್ಯದಲ್ಲಿ ನನ್ನ ಮಾವ ಹಾಗೂ ತಾತನೊಂದಿಗೆ ತರಕಾರಿ ಮಾರುತ್ತಿದ್ದೆ.ನಾನು ಅಲ್ಲಿ ನಿಂಬೆಹಣ್ಣು ಮಾರುತ್ತಿದ್ದುದ್ದನ್ನು ಇನ್ನೂ ಅಲ್ಲಿಯ ಜನ ನೆನೆಸಿಕೊಳ್ಳುತ್ತಿದ್ದಾರೆ. ಬಡತನದಲ್ಲಿ ಹುಟ್ಟಿ ಬೆಳೆದ ನಾನು, ಈ ಮಟ್ಟಕ್ಕೆ ಬೆಳೆದಿದ್ದೇನೆ ಅಂದರೆ‌ ಜನರ ಪ್ರೀತಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ‌ಸಂಘ ಕಾರಣ. ಒಂದು ವಿಶೇಷ ಕಾರಣಕ್ಕೆ‌ ನಾನು ಮಂಡ್ಯದಿಂದ ಶಿವಮೊಗ್ಗಕ್ಕೆ ಬರಬೇಕಾಯಿತು. ದೇವರು ಎಲ್ಲರಿಗೂ ಎಲ್ಲ ಶಕ್ತಿ ನೀಡಿದ್ದಾನೆ. ದೊಡ್ಡ ಗುರಿ ಮುಂದಿಟ್ಟುಕೊಂಡು ದೃಢ ಹೆಜ್ಜೆ ಇಟ್ಟರೆ ಮುಂದೆ ಬರಲು ಸಾಧ್ಯ.

ಪ್ರಧಾನಿ ಮೋದಿ ಭಾರತ ದೇಶದ ಹೆಮ್ಮೆ , ದೇಶದ ಜನರು ಪ್ರಧಾನಿಯನ್ನು ನೋಡಿ ಹಲವು ವಿಷಯಗಳನ್ನು ಕಲಿಯಬೇಕಿದೆ : ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ -Vishwanews24

ಹೋರಾಟದಿಂದಾಗಿಯೇ ನಾನು ಈ ಸ್ಥಿತಿಗೆ ಬಂದಿದ್ದೇನೆ. ತಪ್ಪು ಹೆಜ್ಜೆಯನ್ನಿಡದೇ ಮುಂಬರುವ ಅವಧಿಯಲ್ಲಿ ಶಿವಮೊಗ್ಗ ಮಾತ್ರವಲ್ಲದೆ, ರಾಜ್ಯವನ್ನು ಶಕ್ತಿಮೀರಿ ಅಭಿವೃದ್ಧಿ ಮಾಡುತ್ತೇನೆ. ಶಿವಮೊಗ್ಗಕ್ಕೆ ಎಲ್ಲವನ್ನೂ‌ ಮಾಡಿದ್ದೇನೆ. ಇನ್ನೇನು ಬೇಕೋ ಹೇಳಿ ಅದನ್ನು ಮಾಡೋಣ. ಮುಂದೆ ಅಧಿಕಾರಕ್ಕೆ ಬರುವವರಿಗೆ ಶಿವಮೊಗ್ಗದಲ್ಲಿ ಏನು ಕೆಲಸ ಮಾಡಲು ಇರಬಾರದು.

ಬ್ರಹ್ಮಶ್ರೀ ಪ್ರಶಸ್ತಿಯನ್ನು ಪಡೆಯಲು ಜನಾರ್ದನ ಪೂಜಾರಿಗಳೇ ಅರ್ಹ ವ್ಯಕ್ತಿ ; ನಾನಲ್ಲ : ನಳಿನ್ ಕುಮಾರ್ ಕಟೀಲ್ -Vishwanews24

ಯಾರೂ ಏನೇ ಟೀಕೆ ಮಾಡಲಿ, ನಾವು ಹೋಗುವ ದಾರಿ ಸರಿಯಿದ್ದರೆ ಟೀಕೆಗಳಿಗೆ ತಲೆಬಾಗಬೇಕಿಲ್ಲ. ನಾನು ಎಂದೂ ಟೀಕೆಗಳಿಗೆ ತಲೆ ಬಾಗಿಲ್ಲ.ಜಿಲ್ಲೆಯ ಜನರು ನನ್ನ ಸೋಲು, ಗೆಲುವು, ಕಿಚ್ಚು ಹೋರಾಟಗಳಿಗೆ ಸಾಕ್ಷಿಯಾಗಿ, ನನಗೆ ಬೆಂಬಲ ನೀಡಿದ್ದಾರೆ. ನಾನು ಎಷ್ಟು ಜನ್ಮ‌ ಪಡೆದರೂ ತೀರಿಸಲು ಆಗದ ಪ್ರೀತಿ ನೀಡಿದ್ದೀರಿ. ನನ್ನ ಬೆಳವಣಿಗೆಗೆ ಶಿವಮೊಗ್ಗ ಜನತೆ ಮೆಟ್ಟಿಲುಗಳಾಗಿದ್ದಾರೆ.

ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸಿಡಿದು ಬೆಂಕಿ ಅವಘಡ ; ನಟ ರಿಷಬ್ ಶೆಟ್ಟಿಗೆ ಗಾಯ; ಅಪಾಯದಿಂದ ಪಾರು -Vishwanews24