ಬಳ್ಳಾರಿ:  ಫೆಬ್ರವರಿ 23ಕ್ಕೆ ಸಂಡೂರಿಗೆ ಅಮಿತ್ ಶಾ ಭೇಟಿ: ವಿವಿಧ ಕಾರ್ಯಕ್ರಮದಲ್ಲಿ ಭಾಗಿ – Vishwanews24

Featured, ರಾಜ್ಯ ನ್ಯೂಸ್

ಬಳ್ಳಾರಿ:  ಫೆಬ್ರವರಿ 23ಕ್ಕೆ ಸಂಡೂರಿಗೆ ಅಮಿತ್ ಶಾ ಭೇಟಿ: ವಿವಿಧ ಕಾರ್ಯಕ್ರಮದಲ್ಲಿ ಭಾಗಿ

ಬಳ್ಳಾರಿ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ರಾಜಕೀಯ ಚಟುವಟಿಕೆಗಳು ರಂಗೇರಿದೆ. ಈಗಾಗಲೇ ರಾಜಕೀಯ ವಲಯ ನಾಯಕರು ಮತದಾರರನ್ನು ಸೆಳೆಯಲು ನಾನಾ ತಯಾರಿಗಳು ನಡೆಯುತ್ತಿವೆ.

ಬಿಜೆಪಿ ಕೇಂದ್ರ ನಾಯಕರು ಆಗಾಗ ರಾಜ್ಯಕ್ಕೆ ಬರುತ್ತಿದ್ದಾರೆ.

ರಾಜ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ನಾನಾ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಕರ್ನಾಟಕ್ಕೆ ಕೇಂದ್ರ ನಾಯಕರು ಆಗಾಗ ಬರುತ್ತಿದ್ದಾರೆ. ಇದೀಗ ಮತ್ತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆಬ್ರವರಿ 23ಕ್ಕೆ ಬಳ್ಳಾರಿಯ ಸಂಡೂರಿಗೆ ಭೇಟಿ ನೀಡಿ ರೋಡ್ ಶೋ ಮಾಡಲಿದ್ದಾರೆ. ಹಾಗೂ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಮಂಗಳೂರು : ಕಳ್ಳತನ ಅಥವಾ ಕಳೆದುಕೊಂಡ ಫೋನ್‌ ಬ್ಲಾಕ್‌ ಮಾಡಲು ಹೊಸ ವಿಧಾನ ಜಾರಿ : ದ.ಕ.ಎಸ್ಪಿ – Vishwanews24

ಫೆಬ್ರವರಿ 22 ರಂದು ರಾತ್ರಿ ಜಿಂದಾಲ್​ನಲ್ಲಿರುವ ಹಯಾತ್ ಹೋಟೆಲ್​ನಲ್ಲಿ ಶಾ ತಂಗಲಿದ್ದಾರೆ.ಸಂಡೂರಿನಲ್ಲಿ ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡಲಾಗಿದೆ. ಇನ್ನು ಅಮಿತ್‌ ಶಾ ಆಗಮನ ಹಿನ್ನೆಲೆಯಲ್ಲಿ ಸಂಡೂರು ಸುತ್ತಮುತ್ತ ಪೊಲೀಸ್‌ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Leave a Reply