ಬಸ್ ನಿಲ್ದಾಣದಲ್ಲಿ ಲಾಂಗ್ ಹಿಡಿದು ಆರ್ಭಟಿಸಿದ ಮಹಿಳೆ ; ಪ್ರಯಾಣಿಕರಲ್ಲಿ ಆತಂಕ !!
ಚಿಕ್ಕಮಗಳೂರು: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ಮಚ್ಚು ಹಿಡಿದು ಹತ್ತಿರ ಬಂದ್ರೆ ತಲೆ ಕಡಿಯುತ್ತೇನೆಂದು ಬಸ್ ನಿಲ್ದಾಣದಲ್ಲಿ ಅವಾಂತರ ಸೃಷ್ಠಿಸಿರುವ ಘಟನೆ ಚಿಕ್ಕಮಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ..
ರಾತ್ರಿ 12.30 ಸುಮಾರಿಗೆ ಬಸ್ ನಿಲ್ದಾಣಕ್ಕೆ ಬಂದ ಮಹಿಳೆ ಮಚ್ಚು ಹಿಡಿದು ಜನರಲ್ಲಿ ಆತಂಕ ಸೃಷ್ಟಿಸಿದ್ದಾಳೆ. ಇನ್ನು ಇವಳ ಕೈಯಲ್ಲಿಂದ ಮಚ್ಚು ಪಡೆಯಲು ಸಾರ್ವಜನಿಕರು ಮುಂದಾದಾಗ ಯಾರಾದರೂ ಹತ್ತಿರ ಬಂದರೆ ತಲೆ ಕಡಿಯುತ್ತೇನೆ ಎಂದು ಮಚ್ಚು ಬೀಸಲು ಮುಂದಾಗಿದ್ದಾಳೆ.
ಮಹಿಳೆಯ ಆರ್ಭಟಕ್ಕೆ ಬಸ್ ನಿಲ್ದಾಣದಲ್ಲಿದ್ದ ಜನರು ಕಂಗಾಲಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಕಡೆಗೆ ಒಂದು ಗಂಟೆ ಕಾಲ ಆಕೆಯ ಮನವೊಲಿಸಿ ಆಕೆಯಿಂದ ಮಚ್ಚು ಪಡೆಯುವಷ್ಟರಲ್ಲಿ ಸುಸ್ತಾಗಿದ್ದಾರೆ. ಪೊಲೀಸರು ಸಾರ್ವಜನಿಕರ ಮನವಿ ಮೇರೆಗೆ ಮಚ್ಚು ನೀಡಿದ ಮಹಿಳೆ ಬಳಿಕ ಯಾರಿಗೂ ಸಿಗದಂತೆ ಬಸ್ ನಿಲ್ದಾಣದಿಂದ ಹೊರಹೋಗಿದ್ದಾರೆ.


