Featured

ಬಾಂಗ್ಲಾದೇಶ : ಯಾತ್ರಿಕರ ದೋಣಿ ದುರಂತ : ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆ  – Vishwanews24

ಬಾಂಗ್ಲಾದೇಶ : ಯಾತ್ರಿಕರ ದೋಣಿ ದುರಂತ : ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆ

ಬಾಂಗ್ಲಾದೇಶ : ಬಾಂಗ್ಲಾದೇಶದಲ್ಲಿ ಧಾರ್ಮಿಕ ಯಾತ್ರಾರ್ಥಿಗಳನ್ನು ತುಂಬಿದ್ದ ದೋಣಿ ಮುಳುಗಿದ ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ ಏರಿಕೆಯಾಗುತ್ತಿದೆ. ದೋಣಿಯಿಂದ ನಾಪತ್ತೆಯಾಗಿದ್ದವರ ಪತ್ತೆ ಕಾರ್ಯಾಚರಣೆ ಮುಂದುವರೆದಿದ್ದು, ಇಂದು 10 ಮೃತದೇಹಗಳನ್ನು ರಕ್ಷಕರು ಮತ್ತು ನೌಕಾಪಡೆಯ ಡೈವರ್‌ಗಳು ಹೊರತೆಗೆದಿದ್ದು, ಈ ಮೂಲಕ ಮೃತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.

ಮೃತಪಟ್ಟವರಲ್ಲಿ ಹದಿನೇಳು ಮಕ್ಕಳು ಹಾಗೂ ಕನಿಷ್ಠ 30 ಮಹಿಳೆಯರಿದ್ದಾರೆ. ಘಟನೆಯ ತನಿಖೆಗೆ ಸಮಿತಿ ರಚಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಅಬ್ದುರ್ ರಜಾಕ್ ಅತಿಳಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ, ನೌಕಾಪಡೆಯ ಡೈವರ್‌ಗಳು ಮತ್ತು ಗ್ರಾಮಸ್ಥರು ಸೇರಿದಂತೆ ರಕ್ಷಣಾ ಕಾರ್ಯಕರ್ತರು ದುರಂತ ಸಂಭವಿಸಿದ ಕರೋಟೋವಾ ನದಿಯಲ್ಲಿ ಮೈಲುಗಳಷ್ಟು ಕೆಳಗೆ ಹುಡುಕುತ್ತಿದ್ದಾರೆ ಎಂದು ಬೋಡಾ ಪೊಲೀಸ್ ಮುಖ್ಯಸ್ಥ ಸುಜಯ್ ಕುಮಾರ್ ರಾಯ್ ಹೇಳಿದ್ದಾರೆ.

ಪೋಕ್ಸೋ ಪ್ರಕರಣ : ಅ.10 ರವರೆಗೆ ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ವಿಸ್ತರಣೆ : ಕೋರ್ಟ್ ಆದೇಶ – Vishwanews24

ಉತ್ತರದ ಪಟ್ಟಣವಾದ ಬೋಡಾ ಬಳಿ ಭಾನುವಾರ ದೋಣಿ ಮುಳುಗಿತ್ತು. ಮೊದಲಿಗೆ 24 ಮಂದಿ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಆದರೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಸಾವಿನ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.

ದೋಣಿಯು ಸುಮಾರು 90 ಜನರನ್ನು ಹೊತ್ತೊಯ್ಯುತ್ತಿತ್ತು. ಅವರಲ್ಲಿ ಸುಮಾರು 50 ಜನರು ಶತಮಾನಗಳಷ್ಟು ಹಳೆಯದಾದ ಹಿಂದೂ ದೇವಾಲಯಕ್ಕೆ ಪ್ರಮುಖ ಹಬ್ಬಕ್ಕಾಗಿ ಹೋಗುತ್ತಿದ್ದ ಯಾತ್ರಾರ್ಥಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ನಡುವೆ ಅನುಮತಿ ಪಡೆದ ಸಾಮರ್ಥ್ಯಕ್ಕಿಂತ ಮೂರು ಪಟ್ಟು ದೋಣಿಯನ್ನು ಹೊತ್ತೊಯ್ಯುತ್ತಿತ್ತು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಿರಾಜುಲ್ ಹುದಾ ಸೋಮವಾರ ತಿಳಿಸಿದ್ದಾರೆ.

ಇದನ್ನೂ ಓದಿ : ಆಂತರಿಕ ಶತ್ರುಗಳ ಕಿರಿಕಿರಿ.. ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

 

 

Vishwa News 24

Recent Posts

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ -vishwanews24

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…

16 hours ago

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  -vishwanews24

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  ಉಡುಪಿ : ಮಲಬಾರ್…

1 day ago

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ – vishwanews24

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…

2 days ago

ಭಸ್ಮಾಸುರ ಆಗಿರುವ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು : ಬಿ.ಕೆ ಹರಿಪ್ರಸಾದ್ ವಾಗ್ದಾಳಿ – vishwanews24

ಪ್ರಧಾನಿ  ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ  .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…

2 days ago

ಮಂಗಳೂರು : ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ – vishwanews24

ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…

2 days ago

ಮೂಳೂರು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸದಂತೆ ಅಧಿಕಾರಿಗಳಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ – vishwanews24

ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…

2 days ago