ಬಾಂಬ್ ಇಟ್ಟಿರುವ ಆರೋಪಿ ಯಾವುದೇ ಸಂಘಟನೆಯವನಾಗಿದ್ದರೂ ಆತನ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ : ಬಸವರಾಜ ಬೊಮ್ಮಾಯಿ -Vishwanews24
ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಆರೋಪಿ ಯಾವುದೇ ಸಂಘಟನೆಯವನಾಗಿದ್ದರೂ ಆತನ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರೋಪಿ ಆದಿತ್ಯ ರಾವ್ ಬೆಂಗಳೂರು ಡಿಜಿ ಕಚೇರಿಗೆ ಬಂದು ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಆತ ಯಾವ ಸಂಘಟನೆಗೆ ಸೇರಿದಾತ, ಅಥವಾ ಆತನೇ ವೈಯಕ್ತಿಕವಾಗಿ ಈ ಕೃತ್ಯಕ್ಕೆ ಕೈ ಹಾಕಿದ್ದಾನಾ, ಆತನಿಗೆ ಸ್ಪೋಟಕ ಹೇಗೆ ಲಭ್ಯವಾಯಿತು? ಆತನಿಗೆ ಯಾರಾದರೂ ಬಾಹ್ಯ ಬೆಂಬಲ ನೀಡಿದ್ದಾರಾ? ಎನ್ನುವ ಬಗ್ಗೆ ಇನ್ನಷ್ಟು ತನಿಖೆ ನಡೆಯಬೇಕಾಗಿದೆ.
ಪ್ರಕರಣದಲ್ಲಿ ಪೊಲೀಸರು ತ್ವರಿತಗತಿಯಲ್ಲಿ ಕೆಲಸ ಮಾಡಿದ್ದಾರೆ. ಇದು ನಮ್ಮ ಪೊಲೀಸರ ದಕ್ಷತೆ ಮತ್ತು ಪ್ರಾಮಾಣಿಕತೆ. ಸುಖಾಸುಮ್ಮನೆ ಯಾರೂ ಕೂಡ ಪೊಲೀಸ್ ಇಲಾಖೆ ಬಗ್ಗೆ ಅನಾವಶ್ಯಕವಾಗಿ ಬೊಟ್ಟು ಮಾಡುವುದು ಸರಿಯಲ್ಲ. ಪೊಲೀಸರ ನೈತಿಕತೆ ಕುಗ್ಗುವ ಕೆಲಸವನ್ನು ಯಾರೂ ಸಹ ಮಾಡಬಾರದು ಎಂದರು.
ಇನ್ನು ಶರಣಾಗಿರುವ ಆರೋಪಿ ಯಾವುದೇ ಸಂಘಟನೆಯವನಾದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಸಂಘಟನೆ ಜೊತೆ ಸಂಪರ್ಕವಿದ್ದರೂ ತನಿಖೆ ವೇಳೆ ಎಲ್ಲಾ ವಿಚಾರಗಳು ಬಹಿರಂಗ ಆಗುತ್ತೆ. ಕೇಂದ್ರದ ತಂಡ ಈಗಾಗಲೇ ಬಂದು ತನಿಖೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
