ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು – vishwanews24

Featured, ರಾಜ್ಯ ನ್ಯೂಸ್

ಬಾಗಲಕೋಟೆ: ಕ್ಷುಲ್ಲಕ ಕಾರಣಕ್ಕೆ ಯುವ ಪ್ರೇಮಿಗಳು ಸಾವಿಗೆ ಶರಣು

ಬಾಗಲಕೋಟೆ: ಯುವ ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ರಬಕವಿ ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮ ಹಾಗೂ ಬನಹಟ್ಟಿ ನಗರದಲ್ಲಿ ಪ್ರೇಮಿಗಳು ಸಾವಿಗೆ ಶರಣಾಗಿದ್ದಾರೆ. ಸಾವಿಗೀಡಾದ ಪ್ರೇಮಿಗಳನ್ನು 19 ವರ್ಷದ ಪವಿತ್ರಾ ಹಾಗೂ 20 ವರ್ಷದ ಕಾರ್ತಿಕ್ ಎಂದು ಗುರುತಿಸಲಾಗಿದೆ.

ಮೃತ ಕಾರ್ತಿಕ್ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದವನಾಗಿದ್ದು, ಪವಿತ್ರಾ ಬನಹಟ್ಟಿಯ ಕೆ ಹೆಚ್ ಡಿ ಸಿ ಕಾಲೋನಿ ನಿವಾಸಿಯಾಗಿದ್ದಾಳೆ. ನಿನ್ನೆ ಪವಿತ್ರಾ ಹಾಗೂ ಕಾರ್ತಿಕ್ ಜಗಳ ಮಾಡಿಕೊಂಡಿದ್ದರು. ಪ್ರೇಮಿಯ ಜೊತೆ ಜಗಳದ ನಂತರ ಮನನೊಂದು ಪವಿತ್ರಾ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಈ ವಿಚಾರ ತಿಳಿದು ಆಘಾತಕ್ಕೀಡಾದ ಕಾರ್ತಿಕ್ ಕೂಡ ಬಳಿಕ ಸಾವಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – vishwanews24

Leave a Reply