Featured

ಬಾಲಿವುಡ್ ನಟ ಸುಶಾಂತ್ ಸಿಂಗ್ ಪುಣ್ಯತಿಥಿ , ನಟನನ್ನು ಸ್ಮರಿಸಿದ ಸ್ನೇಹಿತರು, ಅಭಿಮಾನಿಗಳು -Vishwanews24

ಬಾಲಿವುಡ್ ನಟ ಸುಶಾಂತ್ ಸಿಂಗ್ ಪುಣ್ಯತಿಥಿ , ನಟನನ್ನು ಸ್ಮರಿಸಿದ ಸ್ನೇಹಿತರು, ಅಭಿಮಾನಿಗಳು -Vishwanews24

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಇಹಲೋಕ ತ್ಯಜಿಸಿ ಇಂದಿಗೆ ಒಂದು ವರ್ಷ. ಜೂನ್ 14, 2020 ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ಮೃತದೇಹ ಪತ್ತೆಯಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಸುಶಾಂತ್ ಸಿಂಗ್ ನಿಗೂಢ ಸಾವು ಮತ್ತು ಅದಕ್ಕೆ ಸಂಬಂಧಿಸಿರಬಹುದು ಎನ್ನಲಾದ ಡ್ರಗ್ಸ್ ಆಯಾಮ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಿಬಿಐ, ಎನ್‌ಸಿಬಿ ಮತ್ತು ಇಡಿ ತನಿಖೆ ನಡೆಸುತ್ತಿದೆ.

ಸುಶಾಂತ್ ಸಿಂಗ್ ರಜಪೂತ್ ಕೊನೆಯುಸಿರೆಳೆದು ಒಂದು ವರ್ಷ ಕಳೆದರೂ ಅಭಿಮಾನಿಗಳ ಕೂಗು ಕೊಂಚ ಕೂಡ ಕಡಿಮೆ ಆಗಿಲ್ಲ. ಮೊದಲನೇ ವರ್ಷದ ಪುಣ್ಯತಿಥಿ ಸಂದರ್ಭದಲ್ಲಿ ಸುಶಾಂತ್ ಸಿಂಗ್ ಅವರ ಸ್ಮರಣೆ ಮಾಡುತ್ತಿರುವ ಅಭಿಮಾನಿಗಳು ”ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ” ಎಂದೇ ವಾದಿಸುತ್ತಿದ್ದಾರೆ. ಟ್ವಿಟ್ಟರ್‌ನಲ್ಲಿ ಸದ್ಯ #SushantSinghRajput #Murdered #SSRians #SushantJusticeMatters ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ.

ಸುಶಾಂತ್ ಸಿಂಗ್ ಸಾವಿನ ಹಿಂದಿರುವ ನಿಜವಾದ ಕಾರಣ ಮತ್ತು ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕು ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ.

ಸುಶಾಂತ್‌ರನ್ನ ಸ್ಮರಿಸಿದ ಸಂಜಯ್ ಪುರನ್ ಸಿಂಗ್ ಚೌಹಾಣ್

ಸುಶಾಂತ್‌ಗೆ ನಿರ್ದೇಶಕ ಸಂಜಯ್ ಪುರನ್ ಸಿಂಗ್ ಚೌಹಾಣ್ ಆತ್ಮೀಯ ಸ್ನೇಹಿತರಾಗಿದ್ದರು. ಸುಶಾಂತ್ ಪುಣ್ಯತಿಥಿ ಪ್ರಯುಕ್ತ ಸಂಜಯ್ ಪುರನ್ ಸಿಂಗ್ ಚೌಹಾಣ್  ಸುಶಾಂತ್ ಜೊತೆಗಿನ ನೆನಪುಗಳನ್ನು ಸಂಜಯ್ ಪುರನ್ ಸಿಂಗ್ ಚೌಹಾಣ್ ಮೆಲುಕು ಹಾಕಿದ್ದಾರೆ.

”ನನ್ನ ಮತ್ತು ಸುಶಾಂತ್ ನಡುವಿನ ಸಂಬಂಧ ನಟ ಮತ್ತು ನಿರ್ದೇಶಕರ ನಡುವಿನ ಸಂಬಂಧಕ್ಕಿಂತ ಮಿಗಿಲಾಗಿತ್ತು. ಆತ್ಮೀಯ ಸ್ನೇಹಿತರಾಗಿದ್ದ ನಾವು ಎಲ್ಲದರ ಬಗ್ಗೆಯೂ ಚರ್ಚೆ ಮಾಡುತ್ತಿದ್ವಿ. ಎಲ್ಲವನ್ನೂ ಸುಶಾಂತ್ ಪಕ್ಕಾ ಪ್ಲಾನ್ ಮಾಡುತ್ತಿದ್ದರು. ಒಮ್ಮೆ ಲೋನಾರ್ ಲೇಕ್ ಬಳಿ ಕುಳಿತು ಕಥೆಯ ಬಗ್ಗೆ ಚರ್ಚೆ ಮಾಡೋಣ ಎಂದಿದ್ದರು. ಅವರಿಗೆ ಕಥೆ ಹೇಳೋಕೆ ನನಗೆ ತುಂಬಾ ಇಷ್ಟವಾಗುತ್ತಿತ್ತು. ಕಥೆಗೆ ಅವರು ಒಳ್ಳೊಳ್ಳೆ ಅಂಶಗಳನ್ನು ಸೇರಿಸುತ್ತಿದ್ದರು. ಲಡಾಖ್‌ಗೆ ಹೋಗಿದ್ದಾಗ ತಮ್ಮ ಟೆಲಿಸ್ಕೋಪ್‌ನ ಜೊತೆಯಲ್ಲೇ ತೆಗೆದುಕೊಂಡು ಹೋಗಿದ್ದರು. ಒಂದು ಸ್ಪೇಸ್ ಫಿಲ್ಮ್ ನಿರ್ದೇಶನ ಮಾಡುವ ಆಸೆ ಅವರಿಗಿತ್ತು. ಎಲ್ಲೋರಾಗೆ ತೆರಳಿ ಅಲ್ಲಿನ ಕೈಲಾಸ ದೇವಾಲಯ ನೋಡಬೇಕು ಅಂತ ಸುಶಾಂತ್ ಹೇಳುತ್ತಿದ್ದರು. ಎಷ್ಟೋ ಆಸೆ, ಕನಸು ಈಡೇರುವ ಮುನ್ನವೇ ಸುಶಾಂತ್ ನಮ್ಮನ್ನೆಲ್ಲ ಬಿಟ್ಟು ಹೋದರು” ಎಂದಿದ್ದಾರೆ ಸಂಜಯ್ ಪುರನ್ ಸಿಂಗ್ ಚೌಹಾಣ್.

ಸುಶಾಂತ್‌ರನ್ನ ಸ್ಮರಿಸಿದ ಅಮಿತ್ ಸಾದ್

ಸುಶಾಂತ್ ಸಿಂಗ್ ರಜಪೂತ್‌ಗೆ ಅಮಿತ್ ಸಾದ್ ಕೂಡ ಆತ್ಮೀಯರು. ಸುಶಾಂತ್ ಪುಣ್ಯತಿಥಿ ಪ್ರಯುಕ್ತ ಸುಶಾಂತ್‌ರನ್ನ ಅಮಿತ್ ಸಾದ್ ಸ್ಮರಿಸಿದ್ದಾರೆ. ಸುಶಾಂತ್ ಸಿಂಗ್ ಬಗ್ಗೆ ಬಾಂಬೆ ಟೈಮ್ಸ್ ಜೊತೆಗೆ ಅಮಿತ್ ಸಾದ್ ಮಾತನಾಡಿದ್ದಾರೆ.

”ಸುಶಾಂತ್ ನಮ್ಮೊಂದಿಗಿಲ್ಲ ಎಂಬುದನ್ನ ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ನಾನು ಯಾವಾಗಲೂ ಸುಶಾಂತ್‌ರನ್ನ ನೆನಪಿಸಿಕೊಳ್ಳುತ್ತಿರುತ್ತೇನೆ. ಅವರನ್ನು ಮಿಸ್ ಮಾಡಿಕೊಂಡಾಗಲೆಲ್ಲ ಅವರ ಚಿತ್ರಗಳನ್ನು ನೋಡುತ್ತೇನೆ” ಎಂದು ಅಮಿತ್ ಸಾದ್ ಹೇಳಿದ್ದಾರೆ.

Vishwa News 24

Recent Posts

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

18 hours ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

20 hours ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

20 hours ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

20 hours ago

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ – vishwanews24

ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…

20 hours ago

ಹಿಜಬ್‌ಗೆ ಅವಕಾಶ :ಪ್ರಣಾಳಿಕೆಯಲ್ಲಿ ಸಮಾನತೆಯ ಮಾತು ಕೊಟ್ಟಿದ್ವಿ , ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ : ಮಧು ಬಂಗಾರಪ್ಪ – vishwanews24

ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು  ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…

20 hours ago