ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಸಿನಿಮಾಗೆ ಕನ್ನಡಿಗ ರವಿ ಬಸ್ರೂರ್ ಸಂಗೀತ ಸಂಯೋಜನೆ -Vishwanews24
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಸಿನಿಮಾಗೆ ಕನ್ನಡಿಗ ರವಿ ಬಸ್ರೂರ್ ಸಂಗೀತ ಸಂಯೋಜನೆ -Vishwanews24
ಬೆಂಗಳೂರು: ಕನ್ನಡಿಗ ರವಿ ಬಸ್ರೂರ್ ಈಗ ಬಾಲಿವುಡ್ ನಲ್ಲಿ ಮಿಂಚಲಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಕೆಜಿಎಫ್ ಸಿನಿಮಾಗೆ ಸಂಗೀತದ ನೀಡಿ ದೇಶಾದ್ಯಂತ ಮೋಡಿ ಮಾಡಿದ್ದ ರವಿ ಬಸ್ರೂರ್ ಈಗ ಬಾಲಿವುಡ್‍ಗೆ ಹಾರಿದ್ದು, ಸಲ್ಮಾನ್ ನ ‘ಅಂತಿಮ್’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಈ ವಿಚಾರವನ್ನು ಖುದ್ದು ಅವರೇ ಟ್ವಿಟ್ವರ್ ನಲ್ಲಿ, ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಅವರ ಜೊತೆ ಕೆಲಸ ಮಾಡುತ್ತಿರುವುದು ನನಗೆ ಸಂತಸ ತಂದಿದೆ. ಅವರ ಸಿನಿಮಾದಲ್ಲಿ ಹಿನ್ನೆಲೆ ಸಂಗೀತ ಹಾಗೂ ಹಾಡುಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದೇನೆ. ನನ್ನ ಪಯಣಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ ಸಲ್ಮಾನ್ ‘ಅಂತಿಮ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿಯೂ ಸಹ ಅವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಹೇಶ್ ಮಂಜ್ರೆಕರ್ ಆಕ್ಷನ್ ಕಟ್ ಹೇಳುತ್ತಿದ್ದು, ಆಯುಷ್ ಶರ್ಮಾ ಈ ಚಿತ್ರದ ನಾಯಕರಾಗಿದ್ದಾರೆ.
ರವಿ ಬಸ್ರೂರು ಅವರು ಕೆಜಿಎಫ್ ಸಿನಿಮಾ ನಂತರ ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ್ದರು. ಈ ಹಿಂದೆ ಮೂರು ಹಿಂದಿ ಸಿನಿಮಾಗಳಿಗೆ ಸಂಗೀತ ನೀಡಿದ್ದ ಬಸ್ರೂರು ಬಾಲಿವುಡ್ ನಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಬ್ಯಾನರ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
