ಬಿಎಸ್ ವೈ ಸರ್ಕಾರದ ಮೇಲೆ ನಿಗಾ ಇರಿಸಲು ಅಮಿತ್ ಶಾ ರಿಂದ ಮೂರು ತಂಡಗಳ ರಚನೆ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶಾಕ್ ನೀಡಿದ್ದು, ಸರ್ಕಾರದ ಚಲನವಲನದ ಮೇಲೆ ನಿಗಾ ಇರಿಸಲು ಮೂರು ತಂಡಗಳನ್ನು ರಚಿಸಿದ್ದಾರೆ. ಈ ಮೂರು ತಂಡಗಳು ಸರ್ಕಾರ ಮತ್ತು ಸಂಪುಟ ಸಚಿವರ ಕಾರ್ಯವೈಖರಿಯನ್ನು ಗಮನಿಸಿ ಕೇಂದ್ರಕ್ಕೆ ಮಾಹಿತಿ ರವಾನಿಸಲಿದೆ ಎನ್ನಲಾಗಿದೆ.

ಅಮಿತ್ ಶಾ ರಚಿಸಿರುವ ಮೂರು ತಂಡಗಳು ಯಡಿಯೂರಪ್ಪ ಸರ್ಕಾರದ ಪ್ರತಿಯೊಂದು ಮಾಹಿತಿ, ನಾಯಕರ ಚಲನವಲನ ಸೇರಿದಂತೆ ಎಲ್ಲ ವಿಷಯವನ್ನು ಈ ಮೂರು ತಂಡಗಳು ಕಲೆ ಹಾಕಲಿವೆ. ಅಮಿತ್ ಶಾ ಅವರು ಪ್ರಧಾನಿ ಮೋದಿ ಅವರ ಒಪ್ಪಿಗೆ ಪಡೆದು ಮೂರು ತಂಡಗಳನ್ನು ರಚಿಸಿದ್ದಾರೆ.

ಮೂರು ತಂಡದ ಕಾರ್ಯವೈಖರಿ:
1. ಯಡಿಯೂರಪ್ಪ ಅವರ ಜೊತೆ ಪುತ್ರ ವಿಜಯೇಂದ್ರ ಮೇಲೆ ಒಂದು ಜೇಮ್ಸ್ ಬಾಂಡ್ ಟೀಂ ಕೆಲಸ ಮಾಡಲಿದೆ.
2. ಮೂವರು ಡಿಸಿಎಂ, ಪ್ರಭಾವಿ ಖಾತೆ ಹೊಂದಿರುವ ಹಿರಿಯ ಸಚಿವರ ಮೇಲೆ ಮತ್ತೊಂದು ತಂಡ
3. ಉಳಿದ ಸಚಿವರ ಚಲನವಲನ ಮೇಲೆ ಮೂರನೇ ತಂಡ ಗಮನಿಸಲಿದೆ.