ಬಿಗ್ ಬ್ರೇಕಿಂಗ್ ನ್ಯೂಸ್:ಭಾರತದ ತಿರುಗೇಟಿಗೆ ವಿಶ್ವಸಂಸ್ಥೆ ಗಪ್‌ಚುಪ್.! ಸೈನಿಕರಿಗೆ ಬೆಂಬಲ ನೀಡಿದ ಮೋದಿ ಸರಕಾರ!!

Featured, ದೇಶ

ಬ್ಯೂರೊ ರಿಪೋರ್ಟ್ ವಿಶ್ವನ್ಯೂಸ್24

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಯಾವ ರೀತಿಯ ಸುಧಾರಣೆಗಳು ಆಗುತ್ತಿದೆ ಎಂದರೆ ಭಾರತೀಯ ಸೈನಿಕರ ಬಗ್ಗೆ ಯಾರೂ ವಿರೋಧಿಸಿ ಮಾತನಾಡುವ ಹಾಗಿಲ್ಲ. ಯಾಕೆಂದರೆ ತಮ್ಮ ಪ್ರಾಣ ಒತ್ತೆಯಿಟ್ಟು ದೇಶ ಕಾಯುವ ಸೈನಿಕರಿಗೆ ಮೋದಿ ಸರಕಾರ ಸಂಪೂರ್ಣ ಸಹಕಾರ ನೀಡಿ ಅವರ ಬಗ್ಗೆ ಕಾಳಜಿ ವಹಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಕೈಕಟ್ಟಿದಂತಿದ್ದ ಸೈನಿಕರು ಇದೀಗ ಮೋದಿ ಆಡಳಿತದಲ್ಲಿ ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸುವಂತಾಗಿದೆ. ಇಂತಹ ಸೈನಿಕರ ಮೇಲೆ ಪದೇ ಪದೇ ಗಡಿ ಭಾಗದಲ್ಲಿ ಪಾಕಿಸ್ತಾನಿ ಸೈನಿಕರು ಅಥವಾ ಉಗ್ರರು ತೊಂದರೆ ನೀಡುತ್ತಲೇ ಇರುವುದರಿಂದ ಅವರದೇ ಆದ ರೀತಿಯಲ್ಲಿ ಭಾರತೀಯ ಸೈನಿಕರು ಕೂಡ ತಿರುಗೇಟಿ ನೀಡುತ್ತಿದ್ದರು. ಆದರೆ ಇದನ್ನೇ ಭಾರತದ ತಪ್ಪು ಎಂದು ಇತ್ತೀಚೆಗೆ ಆರೋಪಿಸಿದ ವಿಶ್ವಸಂಸ್ಥೆಗೆ ಇದೀಗ ಭಾರತ ಸರಕಾರ ತಕ್ಕ ತಿರುಗೇಟು ನೀಡಿದ್ದಲ್ಲದೆ , ನಮ್ಮ ಸೈನಿಕರ ಬೆಂಬಲಕ್ಕೆ ನಿಂತಿದ್ದಾರೆ.!

ಭಾರತೀಯ ಸೈನಿಕರು ತಾವಾಗಿ ಯಾರ ತಂಟೆಗೂ ಹೋಗುವುದಿಲ್ಲ, ಆದರೆ ದೇಶದ ವಿಚಾರಕ್ಕೆ ಬಂದಾಗ ಯಾವುದೇ ಮುಲಾಜಿಲ್ಲದೆ ವಿರೋಧಿಗಳನ್ನು ಹೆಡೆಮುರಿಕಟ್ಟುವ ಕೆಲಸವನ್ನೂ ನಮ್ಮ ಸೈನಿಕರು ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ವಿಶ್ವಸಂಸ್ಥೆಯು ಭಾರತೀಯ ಸೈನಿಕರು ವಿನಾಃ ಕಾರಣ ಗಡಿ ಭಾಗದಲ್ಲಿ ತೊಂದರೆ ಉಂಟು ಮಾಡಿ ಜನರ ಶಾಂತಿ ಕದಡುತ್ತಿದ್ದಾರೆ, ಭಾರತ ಸರಕಾರ ಇದನ್ನು ಗಮನಿಸಿ ಕ್ರಮ ಕೈಗೊಂಡರೆ ಉತ್ತಮ ಎಂಬ ಸೂಚನೆ ನೀಡಿತ್ತು. ಆದರೆ ಇದೀಗ ವಿಶ್ವಸಂಸ್ಥೆಯ ಆರೋಪಕ್ಕೆ ತಕ್ಕ ಉತ್ತರ ನೀಡಿದ ಭಾರತೀಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಸೈನಿಕರು ಯಾವ ಅಶಾಂತಿ ಕೂಡ ಸೃಷ್ಟಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ..!

ಮಾನವ ಹಕ್ಕುಗಳ ಆಯೋಗವು ಸುಳ್ಳು ವರದಿ ನೀಡಿದೆ..!

ಭಾರತೀಯ ಸೈನಿಕರು ತಾವಾಗಿ ಗಡಿ ಭಾಗದಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದಾರೆ, ಇದರಿಂದ ಭಾರತ ಮತ್ತು ಅಕ್ಕಪಕ್ಕದ ಇತರ ದೇಶಗಳಿಗೂ ತೊಂದರೆಯಾಗಲಿದೆ ಎಂದು ವಿಶ್ವಸಂಸ್ಥೆ ಇತ್ತೀಚೆಗೆ ಭಾರತದ ಮೇಲೆ ಆರೋಪ ಮಾಡಿತ್ತು. ಭಾರತದ ನೆರೆ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಹೊಂದಿರಬೇಕಾದರೆ ಸೈನಿಕರು ಯಾವುದೇ ತೊಂದರೆ ನೀಡಬಾರದು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಭಾರತದ ವಿರುದ್ಧ ದೂರು ನೀಡಿತ್ತು. ಈ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಡೆ ಎಲ್ಲರೂ ಬೆರಳು ತೋರಿಸಿ ಪ್ರಶ್ನಿಸುವಂತಾಗಿತ್ತು. ಆದ್ದರಿಂದ ಈ ಸುಳ್ಳು ಆರೋಪ ಭಾರತಕ್ಕೂ ಕೊಂಚ ಮಟ್ಟಿಗೆ ಇರಿಸುಮುರಿಸು ತಂದಿದ್ದರಿಂದ ಇದೀಗ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೇರವಾಗಿ ವಿಶ್ವಸಂಸ್ಥೆಯನ್ನೇ ಪ್ರಶ್ನಿಸಿದ್ದಾರೆ.!

ಭಾರತೀಯ ಸೈನಿಕರು ಅಂತಹ ಯಾವುದೇ ತೊಂದರೆ ನೀಡಲಿಲ್ಲ, ಮಾನವ ಹಕ್ಕುಗಳ ಆಯೋಗವೇ ಭಾರತದ ವಿರುದ್ಧ ಈ ರೀತಿ ಸುಳ್ಳು ಆರೋಪ ಹೊರಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಗಡಿ ಭಾಗದಲ್ಲಿ ಪಾಕಿಸ್ತಾನವೇ ಕದನ ವಿರಾಮ ಉಲ್ಲಂಘನೆ ಮಾಡುವ ಮೂಲಕ ಭಾರತೀಯ ಸೈನಿಕರಿಗೆ ತೊಂದರೆ ನೀಡುತ್ತಿದೆ. ಆದರೆ ಈ ಆರೋಪವನ್ನು ಭಾರತದ ಮೇಲೆ ಮಾಡಲಾಗುತ್ತಿದೆ, ಇದರ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ಮಾನವ ಹಕ್ಕುಗಳ ಆಯೋಗ ನೀಡಿರುವ ವರದಿಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.!

ಭಾರತೀಯ ಸೈನಿಕರ ವಿಚಾರಕ್ಕೆ ಬಂದಾಗ ಮೋದಿ ಸರಕಾರ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತದೆ. ಗಡಿ ಭಾಗದಲ್ಲಿ ಭಾರತೀಯ ಸೈನಿಕರನ್ನೇ ಗುರಿಯಾಗಿಸಿಕೊಂಡು ಪಾಕಿಸ್ತಾನಿ ಸೈನಿಕರು ಮತ್ತು ಉಗ್ರರು ದಾಳಿ ಮಾಡಿ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದಾಗಲೂ ಸುಮ್ಮನಿದ್ದ ವಿಶ್ವಸಂಸ್ಥೆ ಆಯೋಗ ನೀಡಿರುವ ದೂರಿನ ಸಲುವಾಗಿ ಭಾರತದ ಮೇಲೆ ಆರೋಪ ಹೊರಿಸಿತ್ತು. ಆದ್ದರಿಂದ ಮತ್ತೆ ಕೇಂದ್ರ ಸರಕಾರ ಸೈನಿಕರ ಬೆಂಬಲಕ್ಕೆ ನಿಂತು ಸೈನಿಕರಿಗೆ ಮತ್ತಷ್ಟು ಧೈರ್ಯ ತುಂಬಿದ್ದಾರೆ..!