ಬಿಜೆಪಿಗಿಂತ ಪ್ರಬಲರು ಅನ್ನೊ ಕಾರಣಕ್ಕೆ ಡಿ. ಕೆ ಶಿ ಅವರನ್ನು ಬಂಧಿಸಲಾಗಿದೆ. : ಪ್ರಜ್ವಲ್ ರೇವಣ್ಣ ಆಕ್ರೋಶ -Vishwanews24
ಹಾಸನ: ಬಿಜೆಪಿ ಶಾಸಕರು ಸಾಚಗಳು ಅಂತ ಸಾಬೀತು ಮಾಡಲಿ ಆಗ ನಾವು ಡಿ.ಕೆ ಶಿವಕುಮಾರ್ ಬಂಧನವನ್ನು ಒಪ್ಪಿಕೊಳ್ಳುತ್ತೇವೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಗುರುವಾರ ಆಕ್ರೋಶ ಹೊರಹಾಕಿದರು.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ. ಕೆ ಶಿವಕುಮಾರ್ ಬಂಧನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದ್ವೇಷದ ರಾಜಕಾರಣಕ್ಕೆ ಬಂಧಿಸಲಾಗಿದೆ , ಅವರಿಗಿಂತ ಪ್ರಬಲರು ಅನ್ನೊ ಕಾರಣಕ್ಕೆ ಈ ರೀತಿ ಮಾಡಿದ್ದಾರೆ, ಆದರೆ ಡಿ. ಕೆ ಶಿವಕುಮಾರ್ ಅವರನ್ನು ಕುಗ್ಗಿಸಲು ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಡಿ. ಕೆ ಶಿವಕುಮಾರ್ ತಂದೆಗೆ ಎಡೆ ಇಡ್ತಿನಿ ಅಂದರು. ಸೆಕ್ಯೂರಿಟಿ ಕೊಟ್ಟು ಕಳಿಸಬೇಕಿತ್ತು ಅವರೇನು ಕದ್ದು ಓಡ್ತಿರಲಿಲ್ಲ, ಮಾನವೀಯತೆ ಇರಬೇಕು, ಬಿಜೆಪಿಯವರು ಹಿಂದೂ ಸಂಸ್ಕೃತಿ ಬಗ್ಗೆ ಮಾತಾಡ್ತಾರೆ. ಆದರೆ ಇವತ್ತು ಆ ಸಂಸ್ಕೃತಿ ಇದ್ದಿದ್ದರೆ ತಂದೆಗೆ ಎಡೆ ಇಡಲು ಬಿಡಬೇಕಿತ್ತು ಎಂದರು,
ವರ್ಷಕ್ಕೆ ಒಂದು ಬಾರಿ ಬರುವ ಹಬ್ಬಕ್ಕೂ ಬಿಡಲ್ಲ ಅಂದರೇ ಹೇಗೆ..? ಇಷ್ಟರ ಮಟ್ಟಿನ ದ್ವೇಷರಾಜಕಾರಣ ಒಳ್ಳೆಯದಲ್ಲ ಎಂದು ಪ್ರಜ್ವಲ್ ರೇವಣ್ಣ ಅಸಮಾಧಾನ ಹೊರಹಾಕಿದರು.
