ಬಿಜೆಪಿಗೆ ಈ ಬಾರಿ ಅವಕಾಶ ನೀಡಬೇಡಿ : ಜಯಮಾಲಾ – Vishwanews24

Featured, ಜಿಲ್ಲೆ
ಉಡುಪಿ: ಕೋಮುವಾದಿಗಳು ಅಧಿಕಾರಕ್ಕೆ ಬಾರದಂತೆ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರಕಾರ ಹಾಗೂ ಲೋಕಸಭಾ ಸ್ಥಾನ ಹೊಂದಾಣಿಕೆ ಹಿಂದೆ ಅನೇಕ ರಹಸ್ಯ, ಸತ್ಯಗಳಿವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದ್ದಾರೆ.

ನಗರದಲ್ಲಿರುವ ಬ್ರಹ್ಮಗಿರಿಯ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ನಡೆದ ಜೆಡಿಎಸ್‌ – ಕಾಂಗ್ರೆಸ್‌ ಪದಾಧಿಕಾರಿಗಳು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸುಳ್ಳುಗಳನ್ನೇ ಹೆಣೆಯುತ್ತಿದ್ದು ಅವರಿಗೆ ಈ ಬಾರಿ ಅವಕಾಶ ನೀಡದಿರಿ. ಜೆಡಿಎಸ್‌ – ಕಾಂಗ್ರೆಸ್‌ ಮೈತ್ರಿ ಸರಕಾರ ಮಾಡಿದ್ದು ಕೋಮುವಾದಿಗಳು ಅಧಿಕಾರಕ್ಕೆ ಬಾರದಂತೆ ತಡೆಯಲು. ಯಾವುದೇ ಕಾರಣಕ್ಕೂ ಕೋಮುವಾದಿಗಳು ಅಧಿಕಾರಕ್ಕೆ ಬರಬಾರದು ಎಂದು ಹೇಳಿದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮಾತನಾಡಿ, ಮೀನುಗಾರರು, ರೈತರು, ಯುವಕರು, ಮಹಿಳೆಯರ ಸಮಸ್ಯೆ ಬಗೆಹರಿಸಲು ಸೇವೆ ನಿಟ್ಟಿನಲ್ಲಿ ಕಟಿಬದ್ಧನಾಗುವೆ. ಕರಾವಳಿಯ ನಾಲ್ಕು ಯುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.

ಭಾರತ್ ಮಾತಾಕೀ ಜೈ ಎಂದು ಜಿ.ಪಂ. ಮಾಜಿ ಅಧ್ಯಕ್ಷೆ ಸರಸು ಡಿ. ಬಂಗೇರ ಘೋಷಣೆ ಕೂಗಿದಾಗ ಪ್ರಮೋದ್ ಮಧ್ವರಾಜ್ ಜೆಡಿಎಸ್‍ಗೂ ಘೋಷಣೆ ಕೂಗಿ ಎಂದರು. ಚೌಕಿದಾರ್ ಚೋರ್ ಹೈ ಘೋಷಣೆಯೂ ಮೊಳಗಿತು.