ಬಿಜೆಪಿಯಲ್ಲಿ ಮನೆಯೊಂದು ನೂರೊಂದು ಬಾಗಿಲು: ಪ್ರಿಯಾಂಕ್ ಖರ್ಗೆ -Vishwanews24

Featured, ರಾಜ್ಯ ನ್ಯೂಸ್

ಬಿಜೆಪಿಯಲ್ಲಿ ಮನೆಯೊಂದು ನೂರೊಂದು ಬಾಗಿಲು: ಪ್ರಿಯಾಂಕ್ ಖರ್ಗೆ -Vishwanews24

ಕಲಬುರಗಿ : ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಯಾರು ಎನ್ನುವ ವಿಚಾರ ಈಗ ಅಪ್ರಸ್ತುತ, ನಾವು ಬಹುಮತ ಬಂದಾಗ ಸಿಎಲ್‍ಪಿ ಸಭೆಯಲ್ಲಿ ಹೈಕಮಾಂಡ್‍ಗೆ ಶಾಸಕರ ಅಭಿಪ್ರಾಯ ತಿಳಿಸುತ್ತಾರೆ ಅಂತಾ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಖರ್ಗೆ, ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತೆ ಎಂಬುದು ಕಾದು ನೋಡಬೇಕು. ನಮ್ಮ ಪಕ್ಷದಲ್ಲಿ ಅರ್ಹರು ಬಹಳಷ್ಟು ಜನ ಇದ್ದಾರೆ. ಹಾಗಾಗಿ ಸಿಎಂ ಹುದ್ದೆ ಬಗ್ಗೆ ಚರ್ಚೆ ನಡೆಯುತ್ತಿದೆ. ಕೊರೊನಾ ಸಂದರ್ಭದಲ್ಲಿ ಜನರಿಗೆ ನೆರವಾಗೋ ಬಗ್ಗೆ ನಾವು ಯೋಚನೆ ಮಾಡಬೇಕು. ಬಿಜೆಪಿ ಮನೆಯೊಂದು ಮೂರು ಬಾಗಿಲು ಅಲ್ಲ. ಮನೆಯೊಂದು ನೂರೊಂದು ಬಾಗಿಲು ಎಂದು ಲೇವಡಿ ಮಾಡಿದ್ದಾರೆ.