ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ , ಅಮಿತ್​ ಶಾ, ಮೋದಿ ಅವರ ನೇತೃತ್ವದಲ್ಲಿ ನಾವೆಲ್ಲಾ ಮುನ್ನಡೆಯುತ್ತೇವೆ : ರಮೇಶ್​ ಜಾರಕಿಹೊಳಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: “ಸುಪ್ರೀಂ ಕೋರ್ಟ್​  ತೀರ್ಪು ಹೊರಬಿದ್ದಿದ್ದು ನಾನು ಇದನ್ನು ಸ್ವಾಗತಿಸುತ್ತೇನೆ. ಇನ್ನೇನಿದ್ದರೂ ನಾನು ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ” ಎಂದು ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂದು ಸುಪ್ರೀಂಕೋರ್ಟ್​ ತೀರ್ಪು ಕೊಟ್ಟ ಬೆನ್ನಲ್ಲೇ ಮಾತಾಡಿದ ಅವರು, “ಸುಪ್ರೀಂನಲ್ಲಿ ತೀರ್ಪು ನಮ್ಮ ಪರವಾಗಿ ಬಂದಿರುವುದರಿಂದ ನೆಮ್ಮದಿಯಾಗಿದೆ. ನಮ್ಮ ರಾಜೀನಾಮೆ ಸ್ಪೀಕರ್ ಅಂದು ಅಂಗೀಕರಿಸಬೇಕಿತ್ತು ಎಂದು ನಾನು ಹಲವಾರು ಬಾರಿ ಹೇಳಿಕೊಂಡಿದ್ದೇನೆ. ಬಿಜೆಪಿಯಿಂದ ಟಿಕೆಟ್ ಪಡೆದು ನಾನು ಸ್ಪರ್ಧಿಸುವುದು ಖಚಿತ ಆದರೆ ಬೇರೆಯವರ ವಿಚಾರ ಗೊತ್ತಿಲ್ಲ”.

“ಇಂದು ಸಂಜೆ ಬೆಂಗಳೂರಿಗೆ ತೆರಳಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇವೆ. ಇನ್ನು ಯಡಿಯೂರಪ್ಪ ಅವರ ಸರ್ಕಾರ ಮೂರೂವರೆ ವರ್ಷ ಬಲಿಷ್ಠವಾಗಿರುವುದು ಖಂಡಿತಾ. ಅಮಿತ್​ ಶಾ, ಮೋದಿ ಅವರ ನೇತೃತ್ವದಲ್ಲಿ ನಾವೆಲ್ಲಾ ಮುನ್ನಡೆಯುತ್ತೇವೆ” ಎಂದರು.