ಗದಗ: ‘ಮಾತನಾಡಿದರೆ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು ಎಂದು ನಾನು ಇಷ್ಟು ದಿನ ಸುಮ್ಮನೆ ಇದ್ದೆ. ಆದರೆ, ಇನ್ನು ಮುಂದೆ ಸುಮ್ಮನೆ ಇರೋದಿಲ್ಲ. ಇನ್ನು ಮುಂದೆ ನಾನು ಯಾರ ಮುಲಾಜೂ ಇಲ್ಲದೆ ಮಾತನಾಡುತ್ತೇನೆ. ಈ ಬಾರಿ ನಮ್ಮಂಥವರನ್ನು ಅವಮಾನ ಮಾಡಿದರೆ ಸುಮ್ಮನಿರಲ್ಲ, ಬೀದಿಗೆ ಇಳಿದು ಮಾತನಾಡುತ್ತೇನೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತ ನಾಡಿ, ದೆಹಲಿಗೆ ಅಪಾಯಿಂಟ್‌ಮೆಂಟ್ ಮೇಲೆಯೇ ಹೋಗಬೇಕು ಎಂದೇನೂ ಇಲ್ಲ, ಅವಕಾಶ ಸಿಕ್ಕಾಗಲೆಲ್ಲ ಹೋಗುತ್ತಿರುತ್ತೇನೆ. ಮುಂದೆಯೂ ಹೋಗುತ್ತೇನೆ. ಎಲ್ಲ ವಿಚಾರವನ್ನು ವನ್ನು ಹೈಕಮಾಂಡ್‌ಗೆ ಹೇಳಿ ಬರುತ್ತೇನೆ. ನಾನು ಪಕ್ಷ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ, ಪಕ್ಷ ಬಿಡುವ ಸಂದರ್ಭ ಬಂದಲ್ಲಿ ಹೇಳಿಯೇ ಹೋಗುತ್ತೇನೆ. ಆದರೆ ಬಡವರು, ಶ್ರಮಿಕರು, ರೈತರ ಪರ ಇರುವ ಕಾರ್ಯಕರ್ತರ ಜತೆ ಇರುತ್ತೇನೆ ಎಂ ಎಂದು ಹೇಳಿದರು.
ಬಿಜೆಪಿ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಒಂದು ವೇಳೆ, ನಾನು ಹೋಗಬೇಕು ಅಂದುಕೊಂಡರೆ ನನ್ನನ್ನು ತಡೆಯೋಕೆ ಆಗುತ್ತಾ? ಜೈಲಿನಲ್ಲಿ ಇಡೋಕ್ಕೆ ಆಗುತ್ತಾ? ಈಗಿನ ಕಾಲದಲ್ಲಿ ಯಾರು, ಯಾರ ಮಾತನ್ನೂ ಕೇಳೋಲ್ಲ ಎಂದರು.
ಅಟ್ಟಿಕಾ ಗೋಲ್ಡ್ ಕಂಪನಿಗೆ ಡಬಲ್ ಶಾಕ್ : ED ದಾಳಿ ಬೆನ್ನಲ್ಲೇ, IT ಇಲಾಖೆ ಅಧಿಕಾರಿಗಳಿಂದ ದಾಳಿ ಬೆಂಗಳೂರು: ಅಟ್ಟಿಕಾ…
ಕಾನ್ಪುರದ ಉದ್ಯಮಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಆಸ್ತಿ ಬೇರೆ ಮಹಿಳೆಯ ಪಾಲಾಗಬಹುದೆಂಬ ಭೀತಿಯಿಂದ ತಂದೆಯನ್ನೇ ಮುಗಿಸಿದ ಮಗ …
ಕುಂದಾಪುರ: ಶಾರ್ಜಾದಲ್ಲಿ ನಿಗೂಢ ಹತ್ಯೆಗೀಡಾದ ಅಲ್ವಿನ್ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ಹುಟ್ಟೂರಿಗೆ ಕುಂದಾಪುರ : ಶಾರ್ಜಾದಲ್ಲಿ ಜುಲೈನಲ್ಲಿ ನಿಗೂಢವಾಗಿ…
ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ 2ನೇ ಚಿನ್ನ.. 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಸ್ವರ್ಣ ಪದಕ ಗೆದ್ದ ಕಮಲ್‌ಜೀತ್–ಸುರುಚಿ…
ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಶ್ರೀಗಳಿಂದ ಈ ಬಾರಿಯ ಮೈಸೂರು ದಸರಾ ಉದ್ಘಾಟನೆ : ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು : "ಈ…
ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಿದರೆ, ರಾಜ್ಯದ ಪಾಲು ನೀಡಲು ಸಿದ್ಧ : ಸಿಎಂ ಬೆಂಗಳೂರು: "ಬರಗಾಲದ ಪರಿಸ್ಥಿತಿಯಲ್ಲಿ…