ಬಂಟ್ವಾಳ: ಕಲ್ಲಡ್ಕ ಪ್ರಭಾಕರ್ ಭಟ್ ಕ್ರೈಸ್ತರನ್ನು ಪ್ರಚೋದನೆ ಮಾಡುವ ನಿಟ್ಟಿನಲ್ಲಿ ಭಾಷಣ ಮಾಡಿದ್ದಾರೆ. ದಕ್ಷಿಣ ಕನ್ನಡವನ್ನು ಮತೀಯ ಪ್ರಯೋಗಾಲಯ ಮಾಡಲು ಮುಂದಾದ ಅವರು ಕನಕಪುರದಲ್ಲಿ ಪ್ರಚೋದನಕಾರಿ ಭಾಷಣವನ್ನು ಮಾಡಿದ್ದಾರೆ. ಆದರೆ ಕ್ರೈಸ್ತ ಸಮುದಾಯ ದಕ್ಷಿಣ ಕನ್ನಡ ಜಿಲ್ಲೆಯ ಸಾಮರಸ್ಯ ಬಯಸುವವರು ಎಂದು ಆರ್‌ಎಸ್‌ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ರಮಾನಾಥ್ ರೈ ವಾಗ್ದಾಳಿ ನಡೆಸಿದ್ದಾರೆ.
ಕನಕಪುರದಲ್ಲಿ ಯೇಸು ಪ್ರತಿಭೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸಿ ಕಲ್ಲಡ್ಕ ಪ್ರಭಾಕರ್ ಮಾತನಾಡಿದ್ದರ ವಿರುದ್ಧ ಸಿಡಿಮಿಡಿಗೊಂಡ ಅವರು, “ಬಿಜೆಪಿಯ ಅಂಗಸಂಸ್ಥೆಗಳು ರಾಜ್ಯದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿದೆ. ಪ್ರಭಾಕರ್ ಭಟ್ ಅವರು ಕ್ರೈಸ್ತರನ್ನು ಪ್ರಚೋಧಿಸುವ ನಿಟ್ಟಿನಲ್ಲಿ ಭಾಷಣ ಮಾಡಿದ್ದಾರೆ. ಅವರನ್ನು ಪ್ರಚೋದನೆಗೊಳಿಸಿ ಅವರು ಬೀದಿಗಿಳಿದರೆ ರಾಜಕೀಯ ಲಾಭ ಪಡೆಯುವ ಹುನ್ನಾರ ಮಾಡುತ್ತಿದ್ದಾರೆ. ಆದರೆ ಕ್ರೈಸ್ತರು ಪ್ರಚೋದನೆಗೆ ಒಳಗಾಗುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಶ್ರೀ ರಾಮ ಶಾಲೆಯ ಕುರಿತು ಮಾತನಾಡಿದ ಅವರು, “ರಾಜ್ಯ ಸರ್ಕಾರ ಶ್ರೀ ರಾಮ ಶಾಲೆಗೆ ನೀಡಲಾಗುವ ಅಕ್ಕಿ ನಿಲ್ಲಿಸಿದ್ದಾರೆ ಎಂದು ಹೇಳುತ್ತಾರೆ. ಆದರೆ ಒಂದು ಕೆ.ಜಿ ಅಕ್ಕಿಯೂ ಕೊಲ್ಲೂರು ದೇವಸ್ಥಾನದಿಂದ ಶಾಲೆಗೆ ನೀಡಿಲ್ಲ. ಪ್ರತಿ ತಿಂಗಳು ನಾಲ್ಕು ಲಕ್ಷದ ಚೆಕ್ ಮಾತ್ರ ನೀಡಲಾಗುತ್ತಿದೆ. ಅದನ್ನು ಶಾಲೆಗೆ ಬಳಕೆ ಮಾಡಲಾಗಿದೆಯೋ ಅಥವಾ ಸ್ವಂತ ಕಾರ್ಯಗಳಿಗೆ ಬಳಸಲಾಗಿದೆಯೋ ತಿಳಿದಿಲ್ಲ ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿ ಪಕ್ಷವು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ದ.ಕ ಜಿಲ್ಲೆಯಲ್ಲಿ ನಡೆದ ಯಾವುದೇ ಹತ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೈವಾಡವಿಲ್ಲ. ಈ ವಿಷಯವನ್ನು ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳಲು ಸಿದ್ಧ ಎಂದು ತಿಳಿಸಿದರು.
ರಾಜ್ಯದಲ್ಲಿ ಎಸ್‌ಡಿಪಿಐ ಸಂಘಟನೆ ನಿಷೇಧ ವಿಚಾರದಲ್ಲಿ ಮಾತನಾಡಿ, ನಾನು ಯಾವುದೇ ಮತೀಯವಾದವನ್ನು ಒಪ್ಪುವುದಿಲ್ಲ. ನಿಷೇಧ ಮಾಡುವಲ್ಲಿ ಲಾಭ ನಷ್ಟದ ಲೆಕ್ಕಾಚಾರ ಇರುವ ಸಾಧ್ಯತೆಯಿದೆ. ಇದರಿಂದಾಗಿ ಯಾರಿಗೆ ಲಾಭ ಅನ್ನುವುದನ್ನು ನೀವು ತಿಳಿಯಬೇಕು. ನಿಷೇಧದಿಂದ ಬಿಜೆಪಿಗೆ ಲಾಭ ಆಗುವುದಾದರೆ ನಿಷೇಧ ಮಾಡುತ್ತಾರೆ. ನಷ್ಟ ಆಗುತ್ತದೆ ಎಂದು ಆದಲ್ಲಿ ನಿಷೇಧ ಮಾಡದೆಯೂ ಇರಬಹುದು ಎಂದು ಹೇಳಿದರು.
ಈ ವಿಚಾರದಲ್ಲಿ ನಾನು ಪಕ್ಷದ ನಿರ್ಧಾರಕ್ಕೆ ಬದ್ಧ. ಮತೀಯವಾದಿಗಳೆಲ್ಲರಿಗೂ ಸುಳ್ಳು ಹೇಳುವುದೇ ಬಂಡವಾಳ. ಬಿಜೆಪಿಗೆ ಆಹಾರವೇ ಅಲ್ಪಸಂಖ್ಯಾತರು, ಅವರಿಲ್ಲದಿದ್ರೆ ಬಿಜೆಪಿ ಪಕ್ಷವೇ ಇಲ್ಲ ಎಂದರು.
ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.
ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್
8088827292
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…