ಬಿಜೆಪಿ ಮುಕ್ತ ಭಾರತದ ಆರಂಭ : ರಮ್ಯ
ನವದೆಹಲಿ: ಐದು ರಾಜ್ಯಗಳಲ್ಲಿ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಲೇ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡುವ ಮೂಲಕ ಬಿಜೆಪಿಯನ್ನು ಕುಟುಕಿದ್ದಾರೆ.
2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವನ್ನು ಕಂಡಿತ್ತು. ಪಂಜಾಬ್ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ನೆಲಕಚ್ಚಿತ್ತು. ಅಂದು ನರೇಂದ್ರ ಮೋದಿ ತಮ್ಮ ಟ್ವೀಟರ್ ನಲ್ಲಿ ಕಾಂಗ್ರೆಸ್ ಮುಕ್ತ ಭಾರತ ಎಂದು ಟ್ವೀಟ್ ಮಾಡಿದ್ದರು.
ಇಂದು ಅದೇ ಟ್ವೀಟ್‍ನ ಫೋಟೋವನ್ನು ಎಡಿಟ್ ಮಾಡಿ ರಮ್ಯಾವರು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಪದದ ಮೇಲೆ ಗೆರೆ ಹಾಕಿ ಇದು ಬಿಜೆಪಿ ಮುಕ್ತ ಭಾರತದ ಆರಂಭ ಎಂದು ಹಾಕಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.
Fixed it for you @narendramodi ji #CongressWinsBIG pic.twitter.com/OFnYHRvq7t
— Divya Spandana/Ramya (@divyaspandana) December 11, 2018

