ಬಿಜೆಪಿ ಮುಕ್ತ ಮಾಡುವುದೇ ನಮ್ಮ ಗುರಿ: ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ

Featured, ರಾಜ್ಯ ನ್ಯೂಸ್

ಬೆಂಗಳೂರು: ಕಾಂಗ್ರೆಸ್ ಮುಕ್ತ ಭಾರತ ಅನ್ನೋದು ಬಿಜೆಪಿ ವಾದ. ಆದರೆ ಬಿಜೆಪಿ ಮುಕ್ತ ಮಾಡುವುದೇ ನಮ್ಮ ಗುರಿ ಎಂದು  ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಬಿಜೆಪಿಗಿಂತ ಮತಗಳಿಕೆಯಲ್ಲಿ ಕಾಂಗ್ರೆಸ್ ಶೇ 2ರಷ್ಟು  ಹೆಚ್ಚಿದೆ. ಮುಂದೆ ಒಂದೊಂದು ಬೂತ್ ನಮಗೆ ಬಹಳ ಮುಖ್ಯ. ಹೀಗಾಗಿ ಪ್ರತಿ ಬೂತ್‌ಗೂ ಹೆಚ್ಚಿನ ಒತ್ತು ನೀಡಬೇಕಿದೆ. ಕರಾವಳಿ ಕರ್ನಾಟಕ ಭಾಗದಲ್ಲಿ ನಾವು ವೀಕ್ ಇದ್ದೇವೆ. ಮೈಕ್ರೋಮ್ಯಾನೇಜ್ ಮೆಂಟ್‌ನಂತೆ ಬೂತ್‌ಗೆ ಒತ್ತು ನೀಡಬೇಕು. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರನ್ನ ಒಟ್ಟುಗೂಡಿಸಬೇಕಿದೆ. ಈ ನಿಟ್ಟಿನಲ್ಲಿ ಶಕ್ತಿ ಯೋಜನೆ ಸಹಾಯಕಾರಿಯಾಗಲಿದೆ ಎಂದು ಅವರು ತಿಳಿಸಿದ್ರು.

ಶಕ್ತಿ ಯೋಜನೆ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ ಶಕ್ತಿ ಯೋಜನೆ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ನೋಂದಣಿ ಹಾಗೂ ಜನ ಸಂಪರ್ಕಕ್ಕಾಗಿ ಶಕ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಮ್ಮೆ‌ ನೊಂದಾಯಿಸಿಕೊಂಡರೆ ಎಐಸಿಸಿಯಿಂದ ಕಾಂಗ್ರೆಸ್ ಕಾರ್ಯಕ್ರಮಗಳ ವಿವರ ಲಭ್ಯವಾಗುತ್ತದೆ. ಬಳಿಕ  ರಾಹುಲ್ ಗಾಂಧಿ ಅವರ ಧ್ವನಿ ಮುದ್ರಿತ ಕರೆ ಕಾರ್ಯಕರ್ತರಿಗ ಬರುತ್ತೆ. ಶಕ್ತಿಯೋಜನೆಯಿಂದ ತಳ ಮಟ್ಟದ ಸಂಘಟನೆ ಬಗ್ಗೆ ಖಚಿತ ವಿವರ ಲಭ್ಯವಾಗಲಿದ್ದು, ಇದರ ಸಂಪೂರ್ಣ ವಿವರವನ್ನ ಎಐಸಿಸಿ ನೇರವಾಗಿ ರಾಜ್ಯ ಘಟಕಗಳಿಗೆ ನೀಡಲಿದೆ ಎಂದರು.

ಈ ವೇಳೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಉಪಸ್ಥಿತರಿದ್ದರು.