ಬಿಜೆಪಿ ಶಾಸಕರೇ ಕಣ್ಣಿರು ಹಾಕಿದರೆ ಮತದಾರರು ಏನು ಮಾಡಬೇಕು : ಕುಮಾರಸ್ವಾಮಿ – Vishwanews24

Featured, ರಾಜ್ಯ ನ್ಯೂಸ್

ಬಿಜೆಪಿ ಶಾಸಕರೇ ಕಣ್ಣಿರು ಹಾಕಿದರೆ ಮತದಾರರು ಏನು ಮಾಡಬೇಕು : ಕುಮಾರಸ್ವಾಮಿ

ಮೈಸೂರು: ಇತ್ತೀಚೆಗೆ ನಾನು ಬಿಜೆಪಿ ಶಾಸಕರು ಕಣ್ಣೀರು ಹಾಕಿರುವುದನ್ನು ನೋಡಿದ್ದೇನೆ , ಶಾಸಕರು ಅಲ್ಲದೇ ಸಂಸದರು ಕಣ್ಣೀರು ಹಾಕುವುದನ್ನು ಗಮನಿಸಿದ್ದೇನೆ. ಇವರೇ ಕಣ್ಣೀರಿಟ್ಟರೆ ಅವರಿಗೆ ಮತ ಕೊಟ್ಟ ಜನರ ಗತಿ ಏನು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಜೆಡಿಎಸ್‌ ಪಂಚರತ್ನ ಯಾತ್ರೆಗೂ ಮುನ್ನ ಮೈಸೂರಿನಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಎಚ್‌.ಡಿ.ಕುಮಾರಸ್ವಾಮಿ ಅವರು ವಿಶೇಷ ಪೂಜೆ ಸಲ್ಲಿಸಿ, ಪಕ್ಷದ ಪ್ರಚಾರ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಾಯಕರೇ ಕಣ್ಣಿರು ಹಾಕಿದರೆ ಮತದಾರರು ಏನು ಮಾಡಬೇಕು ಎಂದು ಕೇಳಿದರು. ಇದೇ ವೇಳೆ ಗುಂಬಜ್ ತಂಗುದಾಣವಿವಾದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ‘ಮಸೀದಿಯನ್ನಾದರೂ ಮಾಡಿ, ಗೋಪುರವನ್ನಾದರೂ ಮಾಡಿ. ಜನರಿಗೆ ನೆರಳು ಕೊಡಿ. ಕೆಡವುವ ಕೆಲಸ ಮಾಡಬೇಡಿ. ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬೇಡಿ’ ಎಂದರು

ತಾನು ಮಾದಕ ವ್ಯಸನಿಯಾಗಿದ್ದು, ಆ ಮತ್ತಿನಲ್ಲಿ ಶ್ರದ್ಧಾ ಹತ್ಯೆ ಮಾಡಿದೆ : ಪೊಲೀಸ್ ತನಿಖೆ ವೇಳೆ ಅಫ್ತಾಬ್ – Vishwanews24

Leave a Reply