ಬಿಜೆಪಿ ಶಾಸಕ ಹರೀಶ್ ಪೂಂಜಾರಿಗೆ ತಲ್ವಾರ್ ತೋರಿಸಿ ಬೆದರಿಕೆ :- ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯಾನ ಗಣೇಶ್ ಖಂಡನೆ – Vishwanews24

Featured, ಉಡುಪಿ

ಬಿಜೆಪಿ ಶಾಸಕ ಹರೀಶ್ ಪೂಂಜಾರಿಗೆ ತಲ್ವಾರ್ ತೋರಿಸಿ ಬೆದರಿಕೆ :-ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯಾನ ಗಣೇಶ್ ಖಂಡನೆ

ಶಾಸಕ ಹರೀಶ್ ಪೂಂಜಾ ರ ವಾಹನ ತಡೆದು ತಲ್ವಾರ್ ತೋರಿಸಿ ಬೆದರಿಸಿರುವ ದುಷ್ಟ ಶಕ್ತಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಕರಾವಳಿ ಜಿಲ್ಲೆ ಅನೇಕ ದಿನಗಳಿಂದ ಶಾಂತಿ ಯ ವಾತಾವರಣದಲ್ಲಿದ್ದು,ಕೆಲವು ಶಕ್ತಿಗಳು ಅಶಾಂತಿಯ ವಾತಾವರಣ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ,ನಮ್ಮ ಪಕ್ಷದ ಶಾಸಕರಾದ ಹರೀಶ್ ಪೂಂಜಾ ರು ನಿನ್ನೆ ರಾತ್ರಿ ಕ್ಷೇತ್ರಕ್ಕೆ ವಾಪಸ್ ಸಂದರ್ಭ ಕಾರಿಗೆ ಅಡ್ಡಹಾಕಿ ಚಾಲಕನಿಗೆ ತಲ್ವಾರ್ ತೋರಿಸಿ ಬೆದರಿಸಿದ್ದು ಖಂಡನೀಯ,ಇಂತಹ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ,ತಕ್ಷಣ ಅಪರಾಧಿಗಳನ್ನು ಬಂಧಿಸಿ ಸಮಾಜಘಾತುಕ ರ ಮೇಲೆ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಯನ್ನು ಒತ್ತಾಯಿಸಿದ್ದಾರೆ ಈ ಬಗ್ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ನಯನಾ ಗಣೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹರೀಶ್ ಪೂಂಜಾರ ಮೇಲೆ ತಲವಾರ್ ದಾಳಿ ಯತ್ನ: ಸಮಗ್ರ ತನಿಖೆಗೆ ಪೊಲೀಸ್ ಇಲಾಖೆಗೆ ಗೃಹ ಸಚಿವರು ಸೂಚನೆ ನೀಡಬೇಕು : ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ..

Leave a Reply