ಬಿಜೆಪಿ ಸಂಸದರು ತಳ್ಳಿದ್ದರಿಂದ ಮೊಣಕಾಲುಗಳಿಗೆ ಗಾಯವಾಗಿದೆ : ಖರ್ಗೆ ಆರೋಪ – vishwanews24
ಬಿಜೆಪಿ ಸಂಸದರು ತಳ್ಳಿದ್ದರಿಂದ ಮೊಣಕಾಲುಗಳಿಗೆ ಗಾಯವಾಗಿದೆ: ಖರ್ಗೆ ಗಂಭೀರ ಆರೋಪ, ಸ್ಪೀಕರ್ಗೆ ಪತ್ರ
ಹೊಸದಿಲ್ಲಿ : ಸಂಸತ್ತಿನ ಹೊರಗೆ ಕಾಂಗ್ರೆಸ್ ಪ್ರತಿಭಟನೆ ವೇಳೆ ತನ್ನನ್ನು ಬಿಜೆಪಿ ಸಂಸದರು ತಳ್ಳಿ ಬೀಳಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಬಿಜೆಪಿ ಸಂಸದರು ನನ್ನನ್ನು ತಳ್ಳಿ ಗಾಯಗೊಳಿಸಿದ್ದಾರೆ, ಸಂಸದರೊಂದಿಗೆ ಸಂಸತ್ನ ಮಕರ ದ್ವಾರವನ್ನು ತಲುಪಿದಾಗ ನನ್ನನ್ನು ಬಿಜೆಪಿ ಸಂಸದರು ತಳ್ಳಿದ್ದಾರೆ ನಾನು ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದೆ.
ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮೊಣಕಾಲುಗಳಿಗೆ ಗಾಯವಾಗಿದೆ , ಕಾಂಗ್ರೆಸ್ ಸಂಸದರು ಕುರ್ಚಿ ತಂದು ನನ್ನನ್ನು ಕೂರಿಸಿದರು. ಬಹಳ ಕಷ್ಟದಿಂದ ಮತ್ತು ನನ್ನ ಸಹೋದ್ಯೋಗಿಗಳ ಬೆಂಬಲದಿಂದ ಸದನಕ್ಕೆ ಕುಂಟುತ್ತಾ ಬಂದೆ ಎಂದು ಆರೋಪ ಮಾಡಿ ಸ್ಪೀಕರ್ಗೆ ಖರ್ಗೆ ಪತ್ರ ಬರೆದಿದ್ದಾರೆ.

ಇಂದು ಬೆಳಗ್ಗೆಯಷ್ಟೇ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ತಲೆಗೆ ಗಾಯವಾಗಿದ್ದು, ರಾಹುಲ್ ಗಾಂಧಿಯೇ ತನ್ನನ್ನು ತಳ್ಳಿ ಬೀಳಿಸಿದ್ದರು ಎಂದು ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆಯವರ ಆರೋಪವೂ ಕೇಳಿಬಂದಿದೆ.
ಮಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – vishwanews24
ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಷಯವಾಗಿ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ಸಂಸದರು ಗುರುವಾರ ಸಂಸತ್ತಿನ ಸಂಕೀರ್ಣದಲ್ಲಿ ಪ್ರತಿಭಟನೆ ನಡೆಸಿದರು. ಇನ್ನೂ ಸಂಸತ್ ಭವನ ಆವರಣದಲ್ಲಿ ನಡೆದ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ನಾನು ಯಾರನ್ನೂ ತಳ್ಳಿಲ್ಲ ಸಂಸತ್ತಿನ ಪ್ರವೇಶದ್ವಾರದ ಮೂಲಕ ಸಂಸತ್ ಭವನದ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದೆ. ಈ ವೇಳೆ ಬಿಜೆಪಿ ಸಂಸದರೇ ನನ್ನನ್ನು ತಡೆದರು, ತಳ್ಳಿದರು ಮತ್ತು ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದರು ಎಂದಿದ್ದಾರೆ.
ಉಚ್ಚಿಲ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ; ಪಾದಚಾರಿ ಸಾವು – vishwanews24
