ಬಿಜೆಪಿ ಸರ್ಕಾರಕ್ಕೆ ಭವಿಷ್ಯವಿಲ್ಲ, ವಾಮಮಾರ್ಗದ ಮೂಲಕ ಸರ್ಕಾರ ರಚನೆಯಾಗಿದೆ : ದಿನೇಶ್ ಗುಂಡೂರಾವ್ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ಭವಿಷ್ಯವಿಲ್ಲ, ವಾಮಮಾರ್ಗದ ಮೂಲಕದಿಂದ ಸರ್ಕಾರ ರಚನೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಗುರುವಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಮೂರು ರೀತಿಯ ಅತೃಪ್ತರು ಇದ್ದಾರೆ, ಅದರಲ್ಲಿ ಅನರ್ಹ ಶಾಸಕರ ಒಂದು ಗುಂಪುವಾದರೆ, ಸಚಿವ ಸ್ಥಾನ ಸಿಗದೇ ಇರುವವರದು ಇನ್ನೋಂದು ಗುಂಪು ಹಾಗೂ ಮಂತ್ರಿಯಾದವರು ಕೂಡ ಅಸಮಾಧಾನ ಹೊರಹಾಕಿದ್ದು ಅದು ಮೂರನೇ ಗುಂಪು ಎಂದು ಬಿಜೆಪಿ ಸರ್ಕಾರದ ವಿರುದ್ಧ ಗುಂಡುರಾವ್ ವ್ಯಂಗ್ಯವಾಡಿದರು.

ಸರ್ಕಾರದಲ್ಲಿ ಅಸಮಾಧಾನ ಇರುವುದರಿಂದ ಚುನಾವಣೆ ಯಾವಾಗ ಬೇಕಾದರೂ ಬರಬಹುದು ಎಂದ ಅವರು, ನೆರೆ ಪರಿಹಾರದ ಬಗ್ಗೆ ನಿಮಗೆ ಪ್ರಧಾನಿಗೆ ಹೇಳೋ ಧೈರ್ಯವಿರದಿದ್ದಾರೆ , ನಮ್ಮನಾದರು ದೆಹಲಿಗೆ ಕರೆದುಕೊಂಡು ಹೋಗಿ ಎಂದು ಹೇಳಿದರು.

ಇನ್ನೂಸರ್ಕಾರ ಉಳಿಸಿಕೊಳ್ಳೋಕೆ ಸಿಎಂ ಗಮನಹರಿಸಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಅವರದೇ ಸರ್ಕಾರವಿದ್ದರೂ, ಪ್ರವಾಹದ ಜನರ ಕಡೆ ಗಮನ ಹರಿಸಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅವರು ಕಿಡಿಕಾರಿದರು.