ಬಿಜೆಪಿ ಸರ್ಕಾರದ ಅವಧಿಯಲ್ಲಿ ಧ್ವಂಸ ಮಾಡಿದ್ದ ಮೀನು ಮಾರುಕಟ್ಟೆಯನ್ನು ಪುನರ್ ನಿರ್ಮಿಸಿದ ಕೃಷ್ಣಮೂರ್ತಿ ಆಚಾರ್ಯ .. ಮೀನುಗಾರ ಮಹಿಳೆಯರು ಫುಲ್ ಖುಷ್ – vishwanews24
ಬಿಜೆಪಿ ಸರ್ಕಾರದ ಅವಧಿಯಲ್ಲಿ ಧ್ವಂಸ ಮಾಡಿದ್ದ ಮೀನು ಮಾರುಕಟ್ಟೆಯನ್ನು ಪುನರ್ ನಿರ್ಮಿಸಿದ ಕೃಷ್ಣಮೂರ್ತಿ ಆಚಾರ್ಯ ..
ಮೀನುಗಾರ ಮಹಿಳೆಯರು ಫುಲ್ ಖುಷ
ಉಡುಪಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಸ್ಥಳಿಯ ಬಿಜೆಪಿ ಶಾಸಕರಿದ್ದ ಸಮಯದಲ್ಲಿ ಉಡುಪಿ ಕಿನ್ನಿಮುಲ್ಕಿ ನಗರಸಭಾ ವಾರ್ಡಿನಲ್ಲಿ ಮೀನುಗಾರ ಮಹಿಳೆಯರಿಗಾಗಿ ಸಮಾಜ ಸೇವಕ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ನಿರ್ಮಿಸಿ ಕೊಟ್ಟಿದ್ದ ಮೀನು ಮಾರುಕಟ್ಟೆಯನ್ನು ಆ ಸಮಯದಲ್ಲಿದ್ದ ನಗರಸಭಾ ಅಧಿಕಾರಿಗಳು ಧ್ವಂಸ ಮಾಡಿ ನೆಲಸಮಗೊಳಿಸಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಏರುತಿದ್ದಂತೆಯೇ ಈ ವಿಚಾರವನ್ನು ಚಾಲೆಂಜ್ ಆಗಿ ಪಡೆದ ಕೃಷ್ಣಮೂರ್ತಿ ಆಚಾರ್ಯ ಅವರು ಅದೇ ಜಾಗದಲ್ಲಿ ಹೊಸ ಮೀನು ಮಾರುಕಟ್ಟೆ ನಿರ್ಮಿಸಿ ಇಂದು ಅದನ್ನು ಮೀನುಗಾರ ಮಹಿಳೆಯಿಂದಲೇ ಉದ್ಘಾಟಿಸುವ ಮುಖೇನ ಅಧಿಕಾರಿಗಳಿಗೆ ಸವಾಲೆಸೆದಿದ್ದಾರೆ.

ಅಂದು ಬಡ ಮೀನುಗಾರ ಮಹಿಳೆಯರಿಗೆ ನಿರ್ಮಾಣ ಮಾಡಿದ್ದ ಮಾರುಕಟ್ಟೆಯನ್ನು ನಗರಸಭಾ ಅಧಿಕಾರಿಗಳು ಜೆಸಿಬಿ ಮುಖೇನ ನೆಲಸಮಗೊಳಿಸಿದ್ದರು.
ಅಂದು ನೆಲಸಮಗೊಳಿಸಿದ್ದ ಮಾರುಕಟ್ಟೆ-ಮಾತಿನ ಚಕಾಮಕಿ

ಇಂದು ಮತ್ತೆ ಅದೇ ಜಾಗದಲ್ಲಿ ನೂತನವಾಗಿ ಸುಸಜ್ಜಿತವಾದ ಮೀನು ಮಾರುಕಟ್ಟೆ ನಿರ್ಮಾಣಗೊಂಡು ಉದ್ಘಾಟನೆಗೊಂಡಿದೆ.ಈ ಬಗ್ಗೆ ಸ್ಥಳಿಯ ಮೀನುಗಾರ ಮಹಿಳೆಯರು ಫುಲ್ ಖುಷಿಯಾಗಿದ್ದು ಕೃಷ್ಣಮೂರ್ತಿ ಆಚಾರ್ಯ ಹಾಗೂ ದಂಪತಿಗಳನ್ನ ಅಭಿನಂದಿಸಿ ಆಶೀರ್ವಚಿಸದರು.

