ಬಿಜೆಪಿ ಸರ್ಕಾರ ಮುಂದಿನ ಎರಡುವರೇ ವರ್ಷವೂ ಸಂಪೂರ್ಣ ಅಧಿಕಾರ ನಡೆಸಲಿ, ನಮ್ಮ ಸಹಕಾರವಿರಲಿದೆ : ಕುಮಾರಸ್ವಾಮಿ -Vishwanews24
ಬಿಜೆಪಿ ಸರ್ಕಾರ ಮುಂದಿನ ಎರಡುವರೇ ವರ್ಷವೂ ಸಂಪೂರ್ಣ ಅಧಿಕಾರ ನಡೆಸಲಿ, ನಮ್ಮ ಸಹಕಾರವಿರಲಿದೆ : ಕುಮಾರಸ್ವಾಮಿ -Vishwanews24
ಮೈಸೂರು : ಬಿಜೆಪಿ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ಪಕ್ಷವಲ್ಲ. ಬಿಜೆಪಿ ಸರ್ಕಾರ ಮುಂದಿನ ಎರಡುವರೇ ವರ್ಷವೂ ಸಂಪೂರ್ಣ ಅಧಿಕಾರ ನಡೆಸಲಿ. ಉತ್ತಮ ಅಧಿಕಾರ ನಡೆಸಲಿ ಎನ್ನುವುದೇ ನಮ್ಮ ಉದ್ದೇಶ, ನಮ್ಮ ಸಹಕಾರವಿರಲಿದೆ. ಬಿಜೆಪಿ ಅಷ್ಟು ಸುಲಭವಾಗಿ ಅಧಿಕಾರ ಬಿಟ್ಟುಕೊಡುವ ಪಕ್ಷ ಅಲ್ಲ ಅಂತ ಗೊತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಗ್ರಾಮಪಂಚಾಯಿತಿ ಚುನಾವಣೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇರೋದಿಲ್ಲ. ಆದ್ರೂ ಕಾರ್ಯಕರ್ತರಲ್ಲಿ ಹುಮ್ಮಸ್ಸು ತರಲು ಸಭೆ ಮಾಡಿದ್ದೇವೆ. ಕೆಲವು ಮುಖಂಡರ ಹೇಳಿಕೆ ಗಮನಿಸಿದ್ದೇನೆ. ಅವಿರೋಧ ಆಯ್ಕೆ ಮಾಡಿಕೊಂಡರೆ ಬಹುಮಾನ ಹಾಗೂ ಹೆಚ್ಚಿನ ಅನುದಾನ ಕೊಡುವ ಹೇಳಿಕೆ ನೋಡಿದ್ದೇನೆ. ಈ ಚುನಾವಣೆಯಲ್ಲಿ ಚಿಹ್ನೆ ಇಲ್ಲವಾದರೂ ಪಕ್ಷದ ಕಾರ್ಯಕರ್ತರೇ ಚುನಾವಣೆಗೆ ನಿಲ್ತಾರೆ. ನಮ್ಮ ಪಕ್ಷದ ಕಾರ್ಯಕರ್ತರಿಗು ಸಲಹೆ ಸೂಚನೆ ನೀಡಿದ್ದೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರುದ್ಧ ಅಸಮಾಧಾನ ಹೊರ ಹಾಕಿದ ಹೆಚ್.ಡಿ.ಕುಮಾರಸ್ವಾಮಿ, ನಮ್ಮ ಕುಟುಂಬಕ್ಕೆ ಅದೊಂದು ಶಾಪ ಇದೆ. ನಾವು ಯಾರನ್ನ ಬೆಳೆಸುತ್ತೇವೋ ಅಂತವರಿಂದಲೇ ಮೋಸಗೊಳ್ಳುತ್ತಿದ್ದೇವೆ. ಆ ಶಾಪವನ್ನ ಹೇಗೆ ವಿಮೋಚನೆ ಮಾಡಬೇಕೋ ಎನ್ನುವುದು ನಮಗಿನ್ನು ತಿಳಿಯುತ್ತಿಲ್ಲ. ಒಂದು ರಿಸರ್ಚ್ ಮಾಡಿ ಆ ಬಳಿಕ ಶಾಪ ವಿಮೋಚನೆ ಮಾಡಿಕೊಳ್ಳುತ್ತೆವೆ ಎಂದರು.
